ಸನ್ಮಾರ್ಗ ವಾರ್ತೆ
ಬೆಂಗಳೂರು.ಅ. 23: ಸರಕಾರಿ ಕೆಲಸಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಶಿರವಸ್ತ್ರ ಧರಿಸಲು ಬಿಡದ್ದು ವ್ಯಕ್ತಿಯ ಹಕ್ಕುಗಳ ದಮನಕ್ಕೆ ಸಮ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದರು.
ಅಕ್ಟೋಬರ್ 28,29 ರಂದು ಸರಕಾರಿ ಸೇವೆಯ ನೇಮಕಾತಿ ಪರೀಕ್ಷೆಗಳು ನಡೆಯಲಿದ್ದು ಇದೇ ವೇಳೆ ಮುಖ್ಯಮಂತ್ರಿ ಹಿಜಾಬ್ ಧರಿಸಿ ಪರೀಕ್ಷೆ ಎದುರಿಸಬಹುದು ಎಂದು ಕಾಂಗ್ರೆಸ್ ಸರಕಾರದ ನೀತಿಯನ್ನು ಸುಸ್ಪಷ್ಟವಾಗಿ ತಿಳಿಸಿದರು.
ಹಿಂದಿನ ಬಿಜೆಪಿಯ ಬೊಮ್ಮಾಯಿ ಸರಕಾರ ಸರಕಾರಿ ಶಾಲೆಗಳಿಗೆ ಹಿಜಾಬ್ ಧರಿಸಿ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಮುಖ್ಯಮಂತ್ರಿ ಹೇಳಿಕೆ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನಿರಾಳವಾಗಿರುವಂತೆ ಮಾಡಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಹಿಜಾಬ್ ನಿಷೇಧಿಸಿ ಬಿಜೆಪಿಯ ಬೊಮ್ಮಾಯಿ ಸರಕಾರ ಬಹುದೊಡ್ಡ ಗಂಡಾಂತರವನ್ನು ಸೃಷ್ಟಿಸಿತ್ತು. ಹೀಗೆ ಹಿಜಾಬ್ ಧರಿಸಲು ಬಿಡದ್ದಕ್ಕೆ ಹಿಜಾಬ್ ಸಮತೆ, ಸಮಗ್ರತೆ ಮತ್ತು ಸಾರ್ವತ್ರಿಕ ಕ್ರಮಕ್ಕೆ ಭಂಗವುಂಟು ಮಾಡುತ್ತದೆ ಎಂದು ಸಮರ್ಥಿಸಿಕೊಂಡಿತ್ತು.
2021 ಡಿಸೆಂಬರಿನಲ್ಲಿ ಉಡುಪಿಯ ಖಾಸಗಿ ಕಾಲೇಜಿನಲ್ಲಿ ಶಿರವಸ್ತ್ರ ಧರಿಸಿ ಬಂದ ಆರು ಹೆಣ್ಣು ಮಕ್ಕಳನ್ನು ತರಗತಿ ಪ್ರವೇಶಿಸದಂತೆ ತಡೆ ಹಿಡಿಯಲಾಯಿತು. ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಇಡೀ ರಾಜ್ಯಗಳಿಗೆ ಪರ ವಿರೋಧ ಪ್ರತಿಭಟನೆಗಳು ಕೂಡ ವ್ಯಕ್ತವಾಯಿತು.
ಪ್ರಕರಣ ಕೋರ್ಟಿಗೆ ಹೋದಾಗ ಹಿಜಾಬ್ ಧರಿಸುವುದು ಇಸ್ಲಾಮಿನ ಕಡ್ಡಾಯ ಅಲ್ಲ ಎಂದು ಕೋರ್ಟು ಹೇಳಿತು.
ಈ ತೀರ್ಪನ್ನು ಪ್ರಶ್ನಿಸಿ ಹೆಣ್ಣು ಮಕ್ಕಳು ಸುಪ್ರೀಂಕೋರ್ಟಿನ ಮೊರೆ ಹೋಗಿದ್ದರು. ಘಟನೆಯನ್ನು ಚೀಫ್ ಜಸ್ಟಿಸ್ ಪರಿಗಣನೆಗೆ ಒಪ್ಪಿಸಲಾಗುವುದು . ಇದಕ್ಕಾಗಿ ಹೊಸ ಪೀಠ ರಚಿಸಲಾಗುವುದು ಎಂದು ವರದಿಯಾಗಿತ್ತು. ಈವರೆಗೂ ಇದಕ್ಕೆ ಹೊಸ ಪೀಠ ರಚನೆಯಾಗಿಲ್ಲ.
ಕಳೆದ ವರ್ಷ ಮೇ ತಿಂಗಳಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಗೆದ್ದು ಹಿಜಾಬ್ ನಿಷೇಧವನ್ನು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ನಿಷೇಧವನ್ನು ಹಿಂದೆ ಪಡೆಯುತ್ತದೆ ಎಂದು ಕಾಂಗ್ರೆಸ್ ಶಾಸಕಿ ಕನೀಝ್ ಫಾತಿಮಾ ತಿಳಿಸಿದ್ದರು.












