ಅಮೆರಿಕದ ಪಾಕಿಸ್ತಾನ ದೂತವಾಸದ ಮುಂದೆ ಅನಿವಾಸಿ ಕಾಶ್ಮೀರ ಪಂಡಿತರಿಂದ ಪ್ರತಿಭಟನೆ; ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು

0
349

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್ ಡಿಸಿ,ಅ.23: ಅಮೆರಿಕದ ಪಾಕಿಸ್ತಾನ ದೂತವಾಸದ ಮುಂದೆ ಅನಿವಾಸಿ ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸಿದ್ದಾರೆ. ಅನಿವಾಸಿ ಕಾಶ್ಮೀರದ ಒಕ್ಕೂಟವೂ ಮತ್ತು ಇತರ ಸಂಘಟನೆಗಳು ವಾಹನ ರ್ಯಾಲಿಯಲ್ಲಿ ಭಾಗವಹಿಸಿತು.

ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಾಶ್ಮೀರಕ್ಕೆ ಅನಧಿಕೃತ ನುಸುಳುವಿಕೆ ನಡೆಯುತ್ತಿದೆ ಎಂದು ಆರೋಪಿಸಿದರು. ಆಕ್ರಮಿತ ಕಾಶ್ಮೀರದಿಂದ ಹೊರಗೆ ಹೋಗಬೇಕು. ಕಾಶ್ಮೀರ ಭಾರತದ ಅವಿಭಾಜ್ಯ ಘಟಕವಾಗಿದೆ ಎಂದು ಪ್ರತಿಭಟನಕಾರರು ಹೇಳಿದರು.

73 ವರ್ಷಗಳಿಂದ ಪಾಕಿಸ್ತಾನ ಗಡಿ ನುಸುಳಿ ಬಂದ ಭಯೋತ್ಪಾದನೆಯನ್ನು ಮತ್ತು ಕಾಶ್ಮೀರದ ಬಹಿರಂಗ ಚಟುವಟಿಕೆಗಳನ್ನು ಬಲವಾಗಿ ಖಂಡಿಸಲು ಒಟ್ಟು ಸೇರಿರುವುದೆಂದು ಪ್ರತಿಭಟನೆ ಆಯೋಜಿಸಿದ ಡಾ.ಮೋಹನ್ ಸಪ್ರು ಹೇಳಿದರು. ಕಾಶ್ಮೀರದ ಹಿಂದೂಗಳು, ಸಿಕ್ಖರು, ಕ್ರೈಸ್ತರು, ಬುದ್ಧಧರ್ಮೀಯರನ್ನು ಪಾಕಿಸ್ತಾನ ಗುರಿಮಾಡುತ್ತಿದೆ ಎಂದು ಅವರು ಹೇಳಿದರು.