ಭಾರತ, ರಷ್ಯವನ್ನು ನೋಡಿ, ಅಲ್ಲಿ ವಾಯು ಮಲಿನವಾಗಿದೆ- ಡೊನಾಲ್ಡ್ ಟ್ರಂಪ್

0
336

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.23: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದದಲ್ಲಿ ಭಾರತ ಸಹಿತ ದೇಶಗಳಲ್ಲಿರುವ ವಾಯು ಮಲಿನೀಕರಣವನ್ನು ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ್ದಾರೆ. ಭಾರತ, ಚೀನ, ರಷ್ಯಗಳ ವಾಯು ಮಲೀನಕರಣವನ್ನು ಸೂಚಿಸಿದ ಟ್ರಂಪ್ ಈ ದೇಶಗಳಿಗೆ ವಾಯು ಪರಿಪಾಲನೆಯು ಗೊತ್ತಿಲ್ಲ ಎಂದು ಆರೋಪಿಸಿದರು.

ಕೋಟ್ಯಂತರ ಡಾಲರ್ ಅಗತ್ಯವಿದ್ದುದರಿಂದ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಿತು. ಸಾವಿರಾರು ಕಂಪೆನಿಗಳು ಒಪ್ಪಂದಕ್ಕೊಳಪಡುತ್ತವೆ. ದಶಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಕೈಬಿಡಲಾಗುವುದಿಲ್ಲ. ಅದು ತುಂಬ ಅನ್ಯಾಯದ ವಿಷಯವಾದೀತು ಎಂದು ಟ್ರಂಪ್ ಟಿವಿ ಸಂವಾದದಲ್ಲಿ ಹೇಳಿದರು.

ಜಗತ್ತಿನಲ್ಲಿ ಕಾರ್ಬೊನ್ ಡೈ ಆಕ್ಸೈಡ್ ಹೊರತಳ್ಳುವ ನಾಲ್ಕನೆ ದೇಶ ಭಾರತವಾಗಿದೆ. 2018 ಡಿಸೆಂಬರ್‌ನಲ್ಲಿ ಪ್ರಕಟವಾಗಿದ್ದ ಜಾಗತಿಕ ಕಾರ್ಬನ್ ಯೋಜನೆ ಪ್ರಕಾರ 2017ರಲ್ಲಿ ಜಾಗತಿಕ ಕಾರ್ಬೊನ್ ಹೊರತಳ್ಳುವಿಕೆ ಶೇ ಏಳರಷ್ಟಿತ್ತು.

ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮುಖ್ಯ ಪಾತ್ರವಹಿಸಿ ರೂಪು ನೀಡಿದ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ 2017 ಜೂನ್ ಒಂದರಂದು ಟ್ರಂಪ್ ಸರಕಾರ ಘೋಷಿಸಿತ್ತು. 2019ರಲ್ಲಿ ಹಿಂದೆ ಸರಿಯುವಿಕೆಯ ಪ್ರಕ್ರಿಯೆ ಆರಂಭಿಸಿತು. 2020 ನವೆಂಬರ್ ನಾಲ್ಕಕ್ಕೆ ಅಮೆರಿಕ ಸಂಪೂರ್ಣ ಈ ಒಪ್ಪಂದದಿಂದ ಹೊರಬರಲಿದೆ.