ಯಾವ ಪದವಿಯನ್ನು ಬಯಸುತ್ತಿಲ್ಲ; ಬಿಜೆಪಿಯಲ್ಲಿ ಸಿಗುತ್ತಿರುವ ಗೌರವದಿಂದ ತೃಪ್ತನಾಗಿದ್ದೇ‌ನೆ- ಜ್ಯೋತಿರಾದಿತ್ಯ ಸಿಂಧಿಯಾ

0
454

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.23: ಬಿಜೆಪಿಯಲ್ಲಿ ಸಿಗುತ್ತಿರುವ ಗೌರವದಲ್ಲಿ ತೃಪ್ತನೆಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಸಿಂಧಿಯಾ ಹೇಳಿದ್ದಾರೆ. ಅರ್ಹತೆಯಿರುವವರಿಗೆ ಬಿಜೆಪಿಯಲ್ಲಿ ಸ್ಥಾನಮಾನ ಸಿಗುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯ ಅಧೀನದಲ್ಲಿ ಪಾರ್ಟಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾರ ಜೊತೆ ಗೂಡಿ ಜನರ ಸೇವೆ ಮಾಡಲು ಸಾಧ್ಯವಾಗಿರುವುದು ಭಾಗ್ಯವೆಂದು ಭಾವಿಸಿದ್ದೇನೆಂದು ಸಿಂಧಿಯಾ ಹೇಳಿದರು.

ನನ್ನ ಉದ್ದೇಶ ಜನಸೇವೆಯಾಗಿದೆ. ಕಳೆದ 20 ವರ್ಷಗಳಿಂದ ನನ್ನ ಬಗ್ಗೆ ನಿಮಗೆ ಗೊತ್ತಿದೆ. ಯಾವುದೇ ಕುರ್ಚಿಗೆ ಆಶೆಪಟ್ಟಿಲ್ಲ. ಎಂಟು ವರ್ಷ ಕೇಂದ್ರ ಸಚಿವನಾಗಿದ್ದಾಗ ಒಮ್ಮೆಯೂ ತಾನು ಕೆಂಪು ದೀಪದ ವಾಹನದಲ್ಲಿ ಪ್ರಯಾಣಿಸಿಲ್ಲ ಎಂದು ಸಿಂಧಿಯಾ ಹೇಳಿದರು.

ಸೇವೆ-ಅಭಿವೃದ್ಧಿ ನನ್ನ ಗುರಿಯಾಗಿದೆ. ಸಾರ್ವಜನಿಕ ಸೇವೆಗಾಗಿ ರಾಜಕೀಯ ಪ್ರವೇಶಿಸಿದ್ದೆ. ಬಿಜೆಪಿಯಲ್ಲಿ ಕಡೆಗಣನೆಗೆ ಒಳಗಾಗುತ್ತಿದ್ದೀರಾ ಎಂಬ ಪ್ರಶ್ನೆಗೆ ಬಿಜೆಪಿಯಲ್ಲಿಯೂ ಕಾಂಗ್ರೆಸ್‍ನಲ್ಲಿಯೂ ಕಡೆಗಣಿಸಲ್ಪಟ್ಟಿಲ್ಲ. ಆದರೆ ನನಗೆ ಗೌರವ ಬಿಜೆಪಿಯಲ್ಲಿ ಸಿಕ್ಕಿದೆ ಎಂದು ಅವರು ಹೇಳಿದರು.