ಕೇರಳದ ಆಂಬುಲೆನ್ಸ್, ಸರಕು ಸಾಗಾಟ ವಿವಾದ: ರಾಜ್ಯದ ಬಿಗಿ ನಿಲುವು

0
511

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕ ಗಡಿಯ ಮೂಲಕ ಕೇರಳಕ್ಕೆ ಆಂಬುಲೆನ್ಸ್ ಸಹಿತ ತುರ್ತು ಸೇವೆಗಳನ್ನು ಕೂಡ ಅನುಮತಿಸುವುದಿಲ್ಲ ಎಂದು ರಾಜ್ಯಸರಕಾರ ದೃಢ ನಿರ್ಧಾರ ತಳೆದಿರುವುದಾಗಿ ಕೇರಳ ಮೂಲದ ಪತ್ರಿಕೆಗಳು ವರದಿಯಾಗಿದೆ. ಗಡಿಯ ಮೂಲಕ ಸರಕು ಸರಬರಾಜು ಮಾತ್ರ ಅನುಮತಿಸಬೇಕೆಂದು ಬೇರೆ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಕರ್ನಾಟಕದ ಜನಪ್ರತಿನಿಧಿಗಳಿಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಕಟ್ಟಿನಿಟ್ಟಿನ ಸೂಚನೆ ನೀಡಿದೆ, ಇದರಿಂದಾಗಿ ಮಂಗಳೂರು- ಕರ್ನಾಟಕ, ಮೈಸೂರು, ಎಚ್‍ಡಿಕೋಟೆ ಬಾವಲಿ, ಮಾನಂದವಾಡಿ, ಗುಂಡಲ್‍ಪೇಟೆ- ಮುತ್ತಂಙ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿ ಕೇರಳಕ್ಕೆ ಸರಕು ಸಾಗಾಟಕ್ಕೆ ಅನುಮತಿ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಈ ದಾರಿಯಿಂದ ಈಗಲೂ ಸರಕು ಸಾಗಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ಮಂಗಳೂರು, ಚಾಮರಾಜ ನಗರ, ಕಲಬುರುಗಿ, ಹುಬ್ಬಳ್ಳಿ ಜಿಲ್ಲೆಗಳ ಕರ್ನಾಟಕ ಗಡಿಯಲ್ಲಿ ಸರಕು ಸಾಗಾಟಕ್ಕೆ ಅನುಮತಿ ನೀಡಲಾಗಿದೆ ಮತ್ತು ಅಲ್ಲಿನ ಜನಪ್ರತಿನಿಧಿಗಳು ಮತ್ತು ಕೇಂದ್ರ ಸರಕಾರದ ಸೂಚನೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ತೀರ್ಮಾನ ಜಾರಿಗೊಳಿಸಲಾಗಿದೆ ಎಂದು ಸರಕಾರ ಸ್ಪಷ್ಟೀಕರಣ ನೀಡಿದೆ.

ಆದರೆ ಕೇರಳದ ಕಣ್ಣೂರಿಗೆ ಸುಲಭದಲ್ಲಿ ಸರಕು ಸಾಗಾಟ ಮಾಡಬಹುದಾದ ವೀರಾಜಪೇಟೆ, ಮಾಕೂಟ್ಟಂ, ಕೂಟ್ಟುಪುಯ ದಾರಿಯಲ್ಲಿ ಸರಕು ಸಂಚಾರಕ್ಕೂ ಬಿಡುವುದಿಲ್ಲ ಎಂದು ಕರ್ನಾಟಕ ಸರಕಾರ ಗಟ್ಟಿಯಾಗಿ ನಿಂತಿದೆ. ಮಂಗಳೂರು ಸಹಿತ ದಕ್ಷಿಣ ಕನ್ನಡ ಮೈಸೂರುಗಳಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದರಿಂದ ಕಾಸರಗೋಡಿನಿಂದ ಮತ್ತು ಇತರ ಕೇರಳದ ಗಡಿ ಜಿಲ್ಲೆಗಳಿಂದ ರೋಗಿಗಳನ್ನು ಕರ್ನಾಟಕಕ್ಕೆ ಕರೆತರಬಾರದೆಂದು ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.

ಕೇರಳದಲ್ಲಿ ಮಾರ್ಚ್ 28ರವರೆಗೆ ದೃಢಪಟ್ಟ 176 ಕೊರೊನ ಪ್ರಕರಣದಲ್ಲಿ ಹೆಚ್ಚಿನವರು ಕರ್ನಾಟಕದ ಗಡಿಯನ್ನು ಹಂಚಿಕೊಂಡಿರುವ ಕೇರಳದ ಜಿಲ್ಲೆಗಳಿಗೆ ಸಂಬಂಧಿಸಿದವರು. ಇದರಂತೆ ಮಹಾರಾಷ್ಟ್ರದಲ್ಲಿ ಯೂಕೊರೊನ ಪ್ರಕರಣದಲ್ಲಿ ಹೆಚ್ಚಳವಾಗುತ್ತಿದೆ .

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.