ಜಮಾಅತೆ ಇಸ್ಲಾಮಿ ಹಿಂದ್ ಕೇರಳ ಉಪಾಧ್ಯಕ್ಷರಾಗಿ ಪಿ.ಮುಜೀಬುರ್ರಹ್ಮಾನ್, ವಿ.ಟಿ. ಅಬ್ದುಲ್ಲ ಕೋಯ ಪ್ರಧಾನ ಕಾರ್ಯದರ್ಶಿ

0
458

ಕಲ್ಲಿಕೋಟೆ, ಜು.9: ಜಮಾಅತೆ ಇಸ್ಲಾಮಿ ಹಿಂದ್ ಕೇರಳ ಘಟಕದ ಉಪಾಧ್ಯಕ್ಷ ಪಿ. ಮುಜೀಬುರ್ರಹ್ಮಾನ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ವಿ.ಟಿ. ಅಬ್ದುಲ್ಲಕೋಯ ಆಯ್ಕೆಯಾದರು. ಕಲ್ಲಿಕೋಟೆ, ಹಿರಾಸೆಂಟರ್ ಲ್ಲಿ ನಡೆದ ರಾಜ್ಯ ಸಮಾಲೋಚನಾ ಸಮಿತಿಯ ಅಭಿಪ್ರಾಯ ಪಡೆದ ಬಳಿಕ ರಾಜ್ಯ ಘಟಕದ ಅಧ್ಯಕ್ಷ ಎಂ.ಐ. ಅಬ್ದುಲ್ ಅಝೀಝ್ ಪದಾಧಿಕಾರಿಗಳನ್ನು ಘೋಷಿಸಿದರು.

ಪಿ.ಮುಜೀಬುರ್ರಹ್ಮಾನ್ ಈಗ ರಾಜ್ಯ ಘಟಕದ ಉಪಾಧ್ಯಕ್ಷರಾಗಿಯೇ ಇದ್ದಾರೆ. ರಾಜ್ಯಪ್ರಧಾನ ಕಾರ್ಯದರ್ಶಿಯಾಗಿ ಎರಡು ಬಾರಿ ಮತ್ತು ಸಾಲಿಡಾರಿಟಿ ರಾಜ್ಯ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ. ನಿಲಂಬೂರ್ ನಿವಾಸಿಯಾದ ಇವರು ಶಾಂತಪುರಂ ಇಸ್ಲಾಮಿಯ ಕಾಲೇಜಿನಲ್ಲಿ ಕಲಿತವರು. ಕೇರಳ ಹಜ್ ಕಮಿಟಿ ಸದಸ್ಯರಾದ ವಿ.ಟಿ. ಅಬ್ದುಲ್ಲಕೋಯ ಈ ಹಿಂದೆ ಉಪಾಧ್ಯಕ್ಷರಾಗಿದ್ದರು. ತಳಿಕ್ಕುಳಂ ಇಸ್ಲಾಮಿಯ ಕಾಲೇಜು, ದಅïವಾ ಕಾಲೇಜಿನಲ್ಲಿ ಅವರು ವ್ಯಾಸಂಗ ಮಾಡಿದ್ದರು. ಎಸ್‍ಐಒ ರಾಜ್ಯಾಧ್ಯಕ್ಷರು ಕೂಡಾ ಆಗಿದ್ದರು. ಇವರು ಮಲಪ್ಪುರಂ ವಲಂಚೇರಿಯವರು.