ನಾನು ಬುರ್ಖಾ ಧರಿಸುವುದರಿಂದ ನಿಮಗೇನು ಸಮಸ್ಯೆಯಿದೆ- ಖದೀಜಾ ರಹ್ಮಾನ್

0
1445

ಸನ್ಮಾರ್ಗ ವಾರ್ತೆ

ನವದೆಹಲಿ,ನ.12: ಬುರ್ಖಾ ಧರಿಸುವುದನ್ನು ಟೀಕಿಸಿದವರಿಗೆ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್‍ರ ಪುತ್ರಿ ಹಾಗೂ ಗಾಯಕಿಯಾದ ಖದೀಜ ರಹ್ಮಾನ್ ಉತ್ತರಿಸಿದ್ದಾರೆ. ತಾನು ಬುರ್ಖಾ ಧರಿಸುವುದರಿಂದ ನಿಮಗೆ ಏನು ಸಮಸ್ಯೆ ಇದೆ ಎಂದು ದಿ ಕ್ವಿಂಟ್‍ಗೆ ನೀಡಿದ ಸಂದರ್ಶನದಲ್ಲಿ ಖದೀಜ ಪ್ರಶ್ನಿಸಿದರು. ಕಳೆದವಾರ ಹೊರಬಂದ ಪರಿಶ್ತೇಂ ಎಂಬ ಹಾಡಿನೊಂದಿಗೆ ಖದೀಜಾ ಸಂಗೀತ ಲೋಕವನ್ನು ಪ್ರವೇಶಿಸಿದ್ದಾರೆ. ಮುನ್ನ ಶೌಕತ್ ಅಲಿ ರಚಿಸಿದ ಹಾಡಿಗೆ ಎ.ಆರ್ ರಹ್ಮಾನ್‍ರೇ ಸಂಗೀತ ಸಂಯೋಜಿಸಿದ್ದಾರೆ.

ನಾನು ನನ್ನ ಮೊದಲ ಹಾಡು ಹಾಡಿದೆ. ಅದು ದೇವನ ಕೃಪೆಯಿಂದ ಉತ್ತಮವಾಗಿ ಮೂಡಿ ಬಂತು. ಆದರೆ ಬುರ್ಖಾ ಧರಿಸುವುದಕ್ಕೆ ಹಲವರು ನನ್ನನ್ನು ಟೀಕಿಸುತ್ತಾರೆ. ಸ್ವಯಂ ಆಯ್ಕೆಗಳ ಬಗ್ಗೆ ಯಾವಾಗಲೂ ಮಹಿಳೆಯರು ಟೀಕೆಗೊಳಗಾಗುತ್ತಾರೆ. ಪುರುಷರ ಒಮ್ಮೆಯೂ ಈ ವಿಷಯದಲ್ಲಿ ಗುರಿಯಾಗುವುದಿಲ್ಲ. ಹೀಗೆ ಟೀಕೆಗೊಳಗಾಗುವವರು ಪ್ರಸಿದ್ಧ ಕುಟುಂಬದವರೋ, ಸಾಧಾರಣ ಕುಟುಂಬದವರೊ ಎಂಬ ವ್ಯತ್ಯಾಸ ಇರುವುದಿಲ್ಲ. ಕೆಲಸ ಇಲ್ಲದ ಹಲವರು ಮನೆಯಲ್ಲಿ ಕೂತು ನಮ್ಮ ಚಿತ್ರಗಳ ಸ್ಕ್ರೀನ್ ಶಾಟ್ ತೆಗೆದು ಹಂಚಿಕೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ತನಗಿಂತ ಅವರನ್ನೇ ಹೆಚ್ಚು ಟೀಕಿಸಲಾಗುತ್ತಿದೆ.

ನಾನು ಅಪೂರ್ವ ಬುರ್ಖಾ ಗಾಯಕಿಯರಲ್ಲಿ ಒಬ್ಬಳೆಂದು ಆಕ್ಷೇಪಿಸಲಾಗುತ್ತದೆ. ಯಾಕೆ ನೀವು ನನಗೆ ಹೀಗೆ ಮಾಡುತ್ತೀರಿ? ನನಗೆ ಮಾತ್ರ ಈ ವ್ಯತ್ಯಾಸ ಯಾಕೆ. ನಿಮಗೆ ಹಾಲಿವುಡ್‍ನಲ್ಲಿ ಮಾರ್ಶೆಮೆಲ್ಲೋ ಇದ್ದಾರಲ್ಲಾ. ಯಾರೂ ಅವರ ಬಗ್ಗೆ ಮಾತಾಡುವುದಿಲ್ಲ. ನನ್ನ ಬಗ್ಗೆ ಯಾಕೆ ಮಾತಾಡುತ್ತೀರಿ.

ನನ್ನ ಬಟ್ಟೆಯ ಮೇಲೆ ಯಾಕೆ ನೋಡುತ್ತೀರಿ. ನಾನು ಪೂರ್ಣ ಬಟ್ಟೆ ಧರಿಸಿದ್ದೆನೋ ಇಲ್ಲವೊ ಎಂಬುದು ನಿಮಗೆ ಸಮಸ್ಯೆಯಾಗಬೇಕಾದ ವಿಷಯವಲ್ಲ. ನಮ್ಮ ಜೀವನ ಟಿಆರ್‌ಪಿಗಳನ್ನು ಸುತ್ತುವರಿದಿರುವುದು ಸಂಕಟಕರವಾಗಿದೆ ಮಾತ್ರವಲ್ಲ. ಆ ಮೂಲಕ ಗಮನಸೆಳೆಯಲು ನೀವು ಬಯಸುತ್ತೀರಿ.

ದೇವ ಭಕ್ತಿ ನನಗೆ ಹೆಚ್ಚಿನ ಆತ್ಮವಿಶ್ವಾಸ ಕೊಡುತ್ತದೆ. ಈ ರೀತಿ ಇರುವುದರಲ್ಲಿ ನನಗೆ ಕೆಟ್ಟದನಿಸುವುದಿಲ್ಲ. ಸ್ವಂತ ಕಾಲಲ್ಲಿ ನನಗೆ ಆತ್ಮವಿಶ್ವಾಸವಿದೆ. ನನ್ನ ವಿಶ್ವಾಸ ಆಧ್ಯಾತ್ಮ ಇದು ನನಗೆ ಕಲಿಸಿದೆ.

ಇಂದಿನ ಸೌಂದರ್ಯ ಮಟ್ಟಕ್ಕೆ ಒಪ್ಪುವಂತಾಗಲು ನನಗೆ ನನ್ನನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ಇತರರೊಂದಿಗೆ ಹೋಲಿಸಲು ಹಲವರು ಬಯಸುತ್ತಾರೆ. ಹಾಗೆ ನಾನು ಮಾಡುತ್ತಿದ್ದೆ. ಆದರೆ ಈಗ ನಾನು ಹಾಗೆ ಮಾಡುವುದಿಲ್ಲ. ಕಾರಣ ನಾನು ಹೇಗಿರುವೆನೊ ಅದನ್ನು ಇಷ್ಟಪಡುತ್ತೇನೆ ಎಂದು ಖದೀಜ ರಹ್ಮಾನ್ ಹೇಳಿದರು.