ಖಾಮ್ನೆಯಿ ಅಂತ್ಯಕ್ರಿಯೆ: 20 ಮಿಲಿಯನ್ ಜನರ ನಿರೀಕ್ಷೆ

0
272

ಸನ್ಮಾರ್ಗ ವಾರ್ತೆ

ಇರಾನಿನ ಸರ್ವೋಚ್ಚ ನಾಯಕ ಆಯತುಲ್ಲ ಆಲಿ ಖಾಮ್ನೆಯಿ ಅವರ ಮರಣದ ನಾಲ್ಕು ತಿಂಗಳ ಬಳಿಕ ಇದೀಗ ಅಂತ್ಯಕ್ರಿಯೆಯ ಪ್ರಕ್ರಿಯೆ ನಡೆಯತೊಡಗಿದೆ. ಅವರ ದೇಹವನ್ನು ರಾಜಧಾನಿ ಟೆಹರಾನಿನಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಇರಾನ್ ಮತ್ತು ಇರಾಕ್ ನ ವಿವಿಧ ನಗರಗಳಲ್ಲಿ ಜುಲೈ ಮೂರರಿಂದ ಅದ್ದೂರಿ ಸಮಾರಂಭಗಳು ಪ್ರಾರಂಭವಾಗಿವೆ.

ಜುಲೈ 9ರಂದು ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ. ತೆಹರಾನ್ ನ ಗ್ರಾಂಡ್ ಮಸೀದಿಯಲ್ಲಿ ಮೂರು ದಿನಗಳ ಸಾರ್ವಜನಿಕ ದರ್ಶನ, ಇರಾಕ್ ಮತ್ತು ಕರ್ಬಲ ನಗರಗಳಲ್ಲಿ ಸಮಾರಂಭಗಳ ನಂತರ ಜುಲೈ 9ರಂದು ಖಾಮ್ನೆಯಿ ತವರು ನಾಡಾದ ಮಶಾದಿನಲ್ಲಿರುವ ಇಮಾಮ್ ರಜಾ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಈ ಪ್ರಕ್ರಿಯೆಯಲ್ಲಿ 15 ರಿಂದ 20 ಮಿಲಿಯನ್ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆದರೆ ಇವರ ಮಗ ಮತ್ತು ಈಗಿನ ಸರ್ವೋಚ್ಚ ಧಾರ್ಮಿಕ ನಾಯಕ ಮುಜ್ ತಬಾ ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ. ಅವರಿಗೆ ಜೀವ ಬೆದರಿಕೆ ಇರುವುದರಿಂದ ಅವರು ಭಾಗವಹಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.