ಹಿರಿಯ ಅಣುವಿಜ್ಞಾನಿಯ ಕೊಲೆಯ ಹಿಂದೆ ಟೆಹ್ರಾನ್‍ನ ಅಮಾದ್ ಪ್ರಾಜೆಕ್ಟ್ ಗುರಿಯಿತ್ತು- ಇರಾನ್ ಆರೋಪ

0
365

ಸನ್ಮಾರ್ಗ ವಾರ್ತೆ

ನಿಕೋಷ್ಯ,ಡಿ.1: ಇರಾನಿನ ಹಿರಿಯ ಅಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಯವರ ಕೊಲೆಯ ಹಿಂದಿನ ಉದ್ದೇಶ ಟೆಹ್ರಾನ್ ಆಗಿತ್ತು. ಶುಕ್ರವಾರ ಟೆಹ್ರಾನ್ ಸಮೀಪದ ದಾವಂತಿ ಎಂಬಲ್ಲಿ ಮುಹ್ಸಿನ್‍ರ ಮೇಲೆ ಗುಂಡು ಹಾರಿಸಿ ಕೊಲೆ ನಡೆಸಲಾಗಿತ್ತು.

ಇರಾನಿನ ರೆವಲ್ಯೂಶನರಿ ಗಾರ್ಡಿನ ಹಿರಿಯ ವಿಜ್ಞಾನಿ ಮತ್ತು ಅಣು ಯೋಜನೆಯ ಮುಖ್ಯಸ್ಥರಾಗಿದ್ದು ಅಬ್ಸಾರ್ಡ್ ನಗರದ ಸಮೀಪ ಅಣುಬಾಂಬು ನಿರ್ಮಿಸುವ ರಹಸ್ಯ ಯೋಜನೆಯಾದ ಅಮಾದ್‍ನ ಹಿಂದಿನ ಬುದ್ಧಿಶಕ್ತಿ ಕೂಡಾ ಆಗಿದ್ದರು. ಕೊಲೆಯ ಹಿಂದೆ ಇಸ್ರೇಲ್ ಇದೆ ಎಂದು ಇರಾನ್ ಹೇಳುತ್ತಿದೆ. ಕೊಲೆಕೃತ್ಯದ ಮೂಲಕ ಅವರು ಅಮಾದ್ ಪ್ರಾಜೆಕ್ಟ್‌ಗೆ ಗುರಿಯಿಟ್ಟಿದ್ದಾರೆ. ಇರಾನ್ ಅಣು ಶಕ್ತಿ ಮತ್ತು ರಹಸ್ಯವನ್ನು ನಾಶಪಡಿಸುವುದು ಅದರ ಉದ್ದೇಶವಾಗಿದೆ ಎಂದು ಇರಾನ್ ಹೇಳಿದೆ.

ಆದರೆ ಮುಹ್ಸಿನ್ ಆರಂಭಿಸಿದ ಯೋಜನೆಗಳು ಹೆಚ್ಚು ವೇಗದಿಂದ ಮುಂದುವರಿಯುತ್ತಿದೆ ಎಂದು ರಕ್ಷಣಾ ಸಚಿವ ಅಮೀರ್ ಹಾತಮಿ ಹೇಳಿದರು. ಈ ಹಿಂದೆಯೂ ಇರಾನಿನ ಅಣು ಯೋಜನೆಯಲ್ಲಿದ್ದರು ಎನ್ನಲಾದ ನಾಲ್ವರು ವಿಜ್ಞಾನಿಗಳನ್ನು ವಿವಿಧ ದಾಳಿಗಳಿಂದ ಕೊಲ್ಲಲಾಗಿತ್ತು.