ರಷ್ಯಾ: ಪಾಸ್‌ಪೋರ್ಟ್‌ ಅರ್ಜಿ ಫೋಟೋಗಳಲ್ಲಿ ಹಿಜಾಬ್‌ಗೆ ಅನುಮತಿ

0
220

ಸನ್ಮಾರ್ಗ ವಾರ್ತೆ

ಮಾಸ್ಕೋ: ವಿದೇಶಿಯರಿಗೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ನಿಬಂಧನೆಗಳನ್ನು ರಷ್ಯಾ ಸರಳೀಕರಿಸಿದೆ ಹಾಗೂ ಪಾಸ್‌ಪೋರ್ಟ್‌ ಫೋಟೋಗಳಲ್ಲಿ ಶಿರವಸ್ತ್ರಗಳು ಮತ್ತು ಹಿಜಾಬ್ ಧರಿಸುವುದನ್ನು ಅನುಮತಿಸಿದೆ.

ಮೇ 5ರಂದು ಈ ಹೊಸ ಕಾನೂನು ಜಾರಿಯಾಗಲಿದ್ದು ಪ್ರಕಟಗೊಂಡ ಹತ್ತು ದಿನಗಳ ನಂತರ ಕಾರ್ಯಗತಗೊಳ್ಳಲಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.

“ಅರ್ಜಿದಾರರ ಧಾರ್ಮಿಕ ನಂಬಿಕೆಗಳು ಪರಕೀಯರ ಎದುರು ಶಿರವಸ್ತ್ರವಿಲ್ಲದೆ ಫೋಟೋಗಳಲ್ಲಿ ಕಾಣಿಸುವುದನ್ನು ಅನುಮತಿಸದೇ ಇದ್ದರೆ, ಮುಖದ ಆಕಾರವನ್ನು ಮರೆಮಾಚದ ರೀತಿಯಲ್ಲಿ ಶಿರವಸ್ತ್ರಗಳನ್ನು ಧರಿಸಬಹುದಾಗಿದೆ,” ಎಂದು ದಾಖಲೆ ತಿಳಿಸುತ್ತದೆ.

ಆದರೆ ಅರ್ಜಿದಾರರ ಕೆನ್ನೆ ಅಥವಾ ಮುಖವನ್ನು ಭಾಗಶಃ ಮುಚ್ಚುವಂತಹ ಶಿರವಸ್ತ್ರಗಳನ್ನು ಅನುಮತಿಸಲಾಗುವುದಿಲ್ಲ ಎಂದು ವರದಿ ಹೇಳಿದೆ. ಪಾಸ್‌ಪೋರ್ಟ್‌ ಅರ್ಜಿಗಳಲ್ಲಿ, ಚಾಲನಾ ಪರವಾನಗಿ, ವರ್ಕ್ ಪರ್ಮಿಟ್ ಮತ್ತು ಪೇಟೆಂಟ್ ಸಂಬಂಧ ಫೋಟೋಗಳಲ್ಲಿ ಈಗಾಗಲೇ ರಷ್ಯಾದ ನಾಗರಿಕರಿಗೆ ಹಿಜಾಬ್ ಧರಿಸುವುದು ಅನುಮತಿಸಲಾಗಿದೆ.

ತಮ್ಮ ಧಾರ್ಮಿಕ ನಂಬಿಕೆಗಳಿಗೆ ಬದ್ಧರಾಗಿರುವ ಜೊತೆಗೆ ದೇಶದ ಭದ್ರತೆಯನ್ನೂ ಖಾತರಿಪಡಿಸಲು ಹಾಗೂ ತಪಾಸಣಾ ವ್ಯವಸ್ಥೆಗಳಲ್ಲಿ ವ್ಯಕ್ತಿಯ ಮುಖ ಗುರುತು ಸಾಧ್ಯವಿರುವ ರೀತಿಯಲ್ಲಿ ಇರುವಂತೆ ಈ ಕ್ರಮ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here