ಸನ್ಮಾರ್ಗ ವಾರ್ತೆ
ಕುವೈತ್ನಲ್ಲಿ ವಾಸಿಸುತ್ತಿರುವ ಪ್ರವಾಸಿಗರಿಗೆ ಇನ್ನು ಮುಂದೆ ಕುವೈತ್ನಲ್ಲಿ ವಿದೇಶಿ ಪ್ರಜೆಗಳು ತಮ್ಮ ಪಾಸ್ಪೋರ್ಟ್ ಕಳೆದುಕೊಂಡರೆ ನೇರವಾಗಿ ಪೊಲೀಸ್ ಠಾಣೆ ಅಥವಾ ಸರ್ಕಾರಿ ಕಚೇರಿಗಳಿಗೆ ಅಲೆಯದೆ ಆನ್ಲೈನ್ ಮೂಲಕವೇ ಮಾಹಿತಿ ನೀಡಬಹುದು.
ಕುವೈತ್ ಸರ್ಕಾರದ ಅಧಿಕೃತ ಇ-ಸರ್ಕಾರಿ ಆ್ಯಪ್ ಆಗಿರುವ ‘ಸಹ್ಲ್’ ಮೂಲಕ ಈ ಹೊಸ ಸೇವೆಯನ್ನು ಒದಗಿಸಲಾಗಿದೆ.
‘ಸಹ್ಲ್’ ಆಪ್ನಲ್ಲಿರುವ ‘ಸೆಕ್ಯೂರಿಟಿ ಸರ್ವೀಸಸ್’ (Security Services) ವಿಭಾಗದ ಕೆಳಗೆ ‘ಸರ್ಟಿಫಿಕೇಟ್ ಆಫ್ ಲಾಸ್ ಆಫ್ ಪಾಸ್ಪೋರ್ಟ್’ ಎಂಬ ಆಯ್ಕೆಯನ್ನು ನೀಡಲಾಗಿದೆ.
ಇದರ ಮೂಲಕ ಪ್ರವಾಸಿಗರು ತಮ್ಮ ಪಾಸ್ಪೋರ್ಟ್ ಕಳೆದುಹೋದ ಬಗ್ಗೆ ವರದಿ ಮಾಡುವುದರ ಜೊತೆಗೆ, ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಲು ಅಗತ್ಯವಿರುವ ಅಧಿಕೃತ ನಷ್ಟದ ಪ್ರಮಾಣಪತ್ರವನ್ನು ಸುಲಭವಾಗಿ ಡಿಜಿಟಲ್ ರೂಪದಲ್ಲಿ ಪಡೆಯಬಹುದು.
ಸರ್ಕಾರಿ ಕಚೇರಿಗಳಿಗೆ ನೇರವಾಗಿ ಭೇಟಿ ನೀಡುವ ಪ್ರಮೇಯ ತಪ್ಪುತ್ತವ ಜೊತೆಗೆ ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ರೂಪದಲ್ಲಿ ನಡೆಯುವುದರಿಂದ ಕೆಲಸಗಳು ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ಮುಗಿಯುತ್ತವೆ.
ಕುವೈತ್ ಸರ್ಕಾರವು ತನ್ನ ಡಿಜಿಟಲ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಮತ್ತು ಪ್ರವಾಸಿಗರಿಗೆ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆಯನ್ನಿಟ್ಟಿದೆ.












