ನಿಷೇಧಾಜ್ಞೆ ಉಲ್ಲಂಘಿಸುವವರನ್ನು ಅನ್ನ, ನೀರು ಕೊಡದೆ ಕೂಡಿ ಹಾಕಿ- ಉಪಮುಖ್ಯಮಂತ್ರಿ

0
742

ಸನ್ಮಾರ್ಗ ವಾರ್ತೆ

ಬೆಂಗಳೂರು, ಮಾ. 28- ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರೂ ಅದನ್ನು ಉಲ್ಲಂಘಿಸಿ ಓಡಾಡುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಚಿಂತಿತರಾಗಿದ್ದು, ಯಾರಾದರೂ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡಿದರೆ ಅವರನ್ನು ವಶಕ್ಕೆ ಪಡೆದು ಒಂದು ದಿನ ಅನ್ನ, ನೀರು ಕೊಡದೆ ಠಾಣೆಯಲ್ಲಿ ಕೂಡಿ ಹಾಕಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಕೊರೋನಾ ಕುರಿತ ಸಭೆಯಲ್ಲಿ ಶುಕ್ರವಾರ ಮಾತಾಡುತ್ತಾ ಅವರು ಹೀಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಪೊಲೀಸರು ಇಂಥವರನ್ನು ಹೊಡೆದು-ಬಡಿದು ಸರಿಪಡಿಸುವುದರ ಬದಲು ಮನೆಯಲ್ಲಿ ಕೂಡಿ ಹಾಕಿ ಅನ್ನ, ನೀರು ಕೊಡದೆ ಒಂದು ದಿನ ಕೂರಿಸಬೇಕು ಎಂದವರು ಹೇಳಿದ್ದಾರೆ.