ಮತಾಂತರ ನಿಷೇಧ ಸುಗ್ರೀವಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಕೀಲರು

0
474

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.4: ಲವ್‍ ಜಿಹಾದ್ ಹೆಸರಿನಲ್ಲಿ ಉತ್ತರ ಪ್ರದೇಶ ಯೋಗಿ ಸರಕಾರ ಜಾರಿಗೆ ತಂದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಇಬ್ಬರು ವಕೀಲರು ಮತ್ತು ಕಾನೂನು ತಜ್ಞರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಗ್ರೀವಾಜ್ಞೆ ಜನರ ಮೂಲಭೂತ ಹಕ್ಕುಗಳ ವಿರುದ್ಧವಾಗಿದೆ ಎಂದು ವಕೀಲ ವಿಶಾಲ್ ಠಾಕೂರ್, ಅಭಯ್ ಸಿಂಗ್ ಯಾದವ್ ಮತ್ತು ಕಾನೂನು ಸಂಶೋಧಕ ಪ್ರಾನ್‍ವೇಶ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಕಾನೂನು ವಿರುದ್ಧ ಮತಾಂತರ ನಿಷೇಧ ಸುಗ್ರಿವಾಜ್ಞೆ ಎಂಬ ಹೆಸರಿನಲ್ಲಿ ವಿವಾದಿತ ಕಾನೂನು ಸಮಾಜದಲ್ಲಿರುವ ಕೆಟ್ಟ ಶಕ್ತಿಗಳಿಗೆ ಯಾರನ್ನೂ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಹಾಕುವ ಅವಕಾಶವನ್ನು ನೀಡಬಹುದು ಎಂದು ಅರ್ಜಿದಾರರು ಹೇಳಿದ್ದಾರೆ.

ಜನರು ಅಂತಹ ಕೆಲಸ ಮಾಡದೆಯೇ ಕೇಸುಗಳಲ್ಲಿ ಸಿಕ್ಕಿ ಬೀಳುವರು. ಇದು ಅನ್ಯಾಯಕ್ಕೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮದುವೆಗಾಗಿ ಧರ್ಮ ಬದಲಾಯಿಸುವುದು ಅಪರಾಧವಾಗುವ ಸುಗ್ರೀವಾಜ್ಞೆಯು ಮತಾಂತರ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿದೆ.