ದೇಶದ ಕಾನೂನು ಮತ್ತು ಸುವ್ಯವಸ್ಥೆ ಶ್ರೀಮಂತರ ಪರವಾಗಿದೆ- ನಿವೃತ್ತಿಯ ದಿನದಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜ.ದೀಪಕ್ ಗುಪ್ತಾ ಹೇಳಿಕೆ

0
2717

ಸನ್ಮಾರ್ಗ ವಾರ್ತೆ

ನವ ದೆಹಲಿ, ಮೇ.7: ಸುಪ್ರೀಂ ಕೋರ್ಟ್ ನ್ಯಾಯಾಧೀಶ, ನ್ಯಾಯಮೂರ್ತಿ ದೀಪಕ್ ಗುಪ್ತಾ ಬುಧವಾರ ನಿವೃತ್ತರಾದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಅವರಿಗೆ ವಿದಾಯ ನೀಡಲಾಯಿತು.

ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದಾಯ ನೀಡಿದ ಘಟನೆ ಸಂಭವಿಸಿದೆ. ನ್ಯಾಯಮೂರ್ತಿ ಗುಪ್ತಾ ತಮ್ಮ ಭಾಷಣದಲ್ಲಿ ನ್ಯಾಯ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ. ದೇಶದ ಕಾನೂನು ವ್ಯವಸ್ಥೆಯು ಶ್ರೀಮಂತ ಮತ್ತು ಶಕ್ತಿಶಾಲಿಗಳ ಪರವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ನ್ಯಾಯಾಮೂರ್ತಿಗಳು ತಮ್ಮ ತಲೆಯನ್ನು ಆಸ್ಟ್ರಿಚ್‌ನಂತೆ ಮುಚ್ಚಿಕೊಳ್ಳಲು ಸಾಧ್ಯವಿಲ್ಲ, ಅವರು ನ್ಯಾಯಾಂಗ ಸಮಸ್ಯೆಗಳನ್ನು ಪರಿಗಣಿಸಿ ಕ್ರಮ‌ ಕೈಗೊಳ್ಳಬೇಕಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ಶ್ರೀಮಂತ ಜಾಮೀನಿನಲ್ಲಿದ್ದರೆ ಪ್ರಕರಣವನ್ನು ವಿಳಂಬಿಸಲು ಬಯಸುತ್ತಾನೆ.

ಶ್ರೀಮಂತ ವ್ಯಕ್ತಿಯು ಕಂಬಿಗಳ ಹಿಂದೆ ಇದ್ದರೆ, ಕಾನೂನು ತನ್ನ ಕೆಲಸವನ್ನು ವೇಗವಾಗಿ ಮಾಡುತ್ತದೆ. ಆದರೆ, ಬಡವರ ಪ್ರಕರಣಗಳು ವಿಳಂಬವಾಗುತ್ತವೆ. ಶ್ರೀಮಂತರು ಶೀಘ್ರ ವಿಚಾರಣೆಗಾಗಿ ಹೈಕೋರ್ಟ್‌ಗಳನ್ನು ತಲುಪುತ್ತಾರೆ ಆದರೆ ಬಡವರಿಗೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ, ಶ್ರೀಮಂತ ವ್ಯಕ್ತಿಯು ಜಾಮೀನಿನಲ್ಲಿದ್ದರೆ, ವಿಚಾರಣೆಯನ್ನು ವಿಳಂಬಗೊಳಿಸಲು ಉನ್ನತ ನ್ಯಾಯಾಲಯಗಳಿಗೆ ಹೋಗಲು ಶಕ್ತನಾಗಿರುತ್ತಾನೆ.

ನ್ಯಾಯಾಲಯಗಳು ಬಡವರ ಧ್ವನಿಯನ್ನು ಕೇಳಬೇಕು.

ನ್ಯಾಯಾಂಗವೇ ತನ್ನ ಮೇಲೆ ಜನಸಾಮಾನ್ಯರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಗುಪ್ತಾ ಅವರು ನುಡಿದರು. ದೇಶದ ಜನರಿಗೆ ನ್ಯಾಯಾಂಗದ ಬಗ್ಗೆ ಅಪಾರ ನಂಬಿಕೆ ಇದೆ. ವಕೀಲರು ಕಾನೂನಿನ ಬದಲು ರಾಜಕೀಯ ಮತ್ತು ಸೈದ್ಧಾಂತಿಕತೆಯ ಆಧಾರದ ಮೇಲೆ ವಾದಿಸುವುದನ್ನು ನಾನು ನೋಡಿದ್ದೆನೆ ಆದರೆ ಹಾಗಾಗಬಾರದು. ನನ್ನ ಮತ್ತು ನಿಮ್ಮ ಸಾಂವಿಧಾನಿಕ ಹಕ್ಕುಗಳನ್ನು ಬಿಕ್ಕಟ್ಟಿನ ಸಮಯದಲ್ಲಿ, ವಿಶೇಷವಾಗಿ ಪ್ರಸ್ತುತ ಬಿಕ್ಕಟ್ಟಿನಲ್ಲಿ ಉಲ್ಲಂಘಿಸಲಾಗುವುದಿಲ್ಲ. ಆದರೆ, ಬಡವರ ವಿಷಯದಲ್ಲಿ ಇದು ಯಾವಾಗಲೂ ಇರುತ್ತದೆ. ಆ ಜನರ ಧ್ವನಿ ಕೇಳಿಸುವುದಿಲ್ಲ, ಆದ್ದರಿಂದ ಅವರು ಬಳಲುತ್ತಿದ್ದಾರೆ. ಯಾರಾದರೂ ಧ್ವನಿ ಎತ್ತಿದರೆ, ನ್ಯಾಯಾಲಯಗಳು ಅವರ ದ್ವನಿಯನ್ನು ಕೇಳಬೇಕು. ಅವರಿಗಾಗಿ ಏನು ಮಾಡಬೇಕಾಗಿದೆಯೋ ಅದನ್ನು ಮಾಡಬೇಕು.

ನ್ಯಾಯಮೂರ್ತಿ ಗುಪ್ತಾ 2017 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದರು

ನ್ಯಾಯಮೂರ್ತಿ ಗುಪ್ತಾರವರು ತ್ರಿಪುರ ಹೈಕೋರ್ಟ್‌ನ ಮೊದಲ ಮುಖ್ಯ ನ್ಯಾಯಮೂರ್ತಿಯಾದರು. ಅವರು ಹಿಮಾಚಲಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರೂ ಆಗಿದ್ದರು. 2017 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದರು. ಸುಪ್ರೀಂ ಕೋರ್ಟ್‌ನ ಮೂರು ವರ್ಷಗಳ ಅವಧಿಯಲ್ಲಿ ಅವರು ಅನೇಕ ಪ್ರಮುಖ ನಿರ್ಧಾರಗಳನ್ನು ನೀಡಿದರು. ಅಪ್ರಾಪ್ತ ಹೆಂಡತಿಯ ಒಪ್ಪಿಗೆಯ ಹೊರತಾಗಿಯೂ, ಲೈಂಗಿಕ ಸಂಪರ್ಕ ಹೊಂದುವುದನ್ನು ಅತ್ಯಾಚಾರವೆಂದು ಪರಿಗಣಿಸಲಾಗುತ್ತದೆ ಎಂಬ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಗುಪ್ತಾ ನೀಡಿದ್ದರು.