ಪುಣೆಯ “ಗೋಲ್ಡ್ ಮ್ಯಾನ್” ಖ್ಯಾತಿಯ ಸಾಮ್ರಾಟ್ ಮೋಝ್‌ ಹೃದಯಾಘಾತದಿಂದ ನಿಧನ

0
1076

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರ, ಮೇ,7: ಪ್ರತಿನಿತ್ಯ ಹತ್ತು ಕೆ.ಜಿ. ಬಂಗಾರ ಧರಿಸಿ ಸಾರ್ವಜನಿಕವಾಗಿ “ಗೋಲ್ಡ್ ಮೆನ್ ” ಎಂದು ಖ್ಯಾತಿ ಪಡೆದಿದ್ದ ಪುಣೆಯ ಸಂಗಮವಾಡಿ ಪ್ರದೇಶದ ನಿವಾಸಿ ಸಾಮ್ರಾಟ್ ಮೋಝ್ ಹೃದಯಾಘಾತದಿಂದ ನಿಧನರಾದರು.

ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಅವರಿಗೆ 39 ವರ್ಷ ವಯಸ್ಸಾಗಿತ್ತು. ಇವರು ತಾಯಿ, ಪತ್ನಿ, ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಾಜಕೀಯವಾಗಿ ವಿವಿಧ ಪಕ್ಷಗಳೊಂದಿಗೆ ಸಂಪರ್ಕ ಹೊಂದಿದ್ದ ಇವರು, 2011 ರಲ್ಲಿ ಎಂ.ಎನ್.‌ಎಸ್. ಪಕ್ಷದಿಂದ ಶಾಸಕರಾಗಿದ್ದ ರಮೇಶ್ ವಂಝಾಲೆ ಸಂಬಂಧಿಯಾಗಿದ್ದಾರೆ.

ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯ ಮೂಲಕ ತನ್ನ ಕುರಿತು ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಅವರು ಇತ್ತೀಚೆಗೆ ಪುಣೆ ಪೊಲೀಸರಿಗೆ ದೂರು ನೀಡಿದ್ದರು.

ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರ ಕೊನೆಯ ವಿಧಿಗಳನ್ನು ಯೆರ್ವಾಡಾದಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ನಡೆಸಲಾಯಿತು.