ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.12: ಅಮೇರಿಕ ಸರಕಾರದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ನಿರೀಕ್ಷಣಾ ಸಮಿತಿಗೆ ಭಾರತ ಸಂದರ್ಶನ ಅನುಮತಿಯನ್ನು ನಿರಾಕರಿಸಿದ್ದು ಭಾರತದ ಪ್ರಜೆಗಳ ಸಂವಿಧಾನಿಕ ಹಕ್ಕನ್ನು ವಿದೇಶ ಸಮಿತಿಯೊಂದು ಪರಿಶೀಲಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಇದಕ್ಕೆ ಸರಕಾರ ಸಬೂಬು ನೀಡಿದೆ. 2019ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಮಿತಿಯ ವರದಿ ಬುಧವಾರ ಹೊರಬಂದಿದ್ದು ಇದಾದ ನಂತರ ಭಾರತ ಅನುಮತಿ ನಿರಾಕರಿಸಿತು. ವರದಿ ಪೂರ್ವಗ್ರಹದ್ದು ಮತ್ತು ಪಕ್ಷಪಾತದಿಂದ ಕೂಡಿದೆ ಎಂದು ವಿದೇಶ ಸಚಿವ ಜಯಶಂಕರ್ ಹೇಳಿದ್ದರು.
2019ರ ವರದಿಯಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ದೊಡ್ಡ ಮಟ್ಟದ ಅಡ್ಡಿಯಿದೆ ಎನ್ನಲಾಗಿದೆ. ಅಲ್ಪಸಂಖ್ಯಾತರು, ದಲಿತರ ಮೇಲೆ ದಾಳಿ ನಡೆಯುತ್ತಿದ್ದು ಪೌರತ್ವ ತಿದ್ದುಪಡಿ ಕಾನೂನು, ಕಾಶ್ಮೀರದ ಪ್ರಕ್ರಿಯೆಯಲ್ಲವೂ ಧಾರ್ಮಿಕ ತಾರತಮ್ಯಕ್ಕೆ ಉದಾಹರಣೆಯಾಗಿ ವರದಿ ಎತ್ತಿ ಹಿಡಿದಿತ್ತು. ದನದ ಸಂರಕ್ಷರ ದಾಳಿಯೂ ವರದಿಯಲ್ಲಿದೆ. ಜನರ ಗುಂಪು ದಾಳಿಯಲ್ಲಿ ಪ್ರತ್ಯೇಕ ವಿಭಾಗವು ಬಲಿಪಶು ಆಗುತ್ತಿರುವುದು ಹೆಚ್ಚುತ್ತಿದೆ ಎಂದು ವರದಿ ವಿವರಿಸಿದೆ.
ಅಮೇರಿಕದ ತಂಡಕ್ಕೆ ಭೇಟಿಗೆ ಅನುಮತಿ ಕೊಡುವ ಆತ್ಮವಿಶ್ವಾಸವನ್ನು ಭಾರತ ಪ್ರಕಟಿಸಬೇಕಿತ್ತು ಎಂದು ಸಮಿತಿ ವಕ್ತಾರ ಡ್ಯಾನಿಯಲ್ ಹೇಳಿದರು. ಬಹುತ್ವ ಪ್ರಜಾಪ್ರಭುತ್ವ ದೇಶವೂ, ಅಮೆರಿಕದ ನಿಕಟಮಿತ್ರನೂ ಆದ ಭಾರತ ಅದರ ನಿರೀಕ್ಷಕ ಸಮಿತಿಗೆ ಅನುಮತಿ ನೀಡಬೇಕೆಂದು ಅವರು ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿತು. ಸಂದರ್ಶನ ಕ್ರಿಯಾತ್ಮಕ ಸಂವಾದಕ್ಕೆ ಅಭಿಪ್ರಾಯಗಳನ್ನು ಪರಸ್ಪರ ಹಂಚುವುದರಿಂದ ಸಹಕಾರಿಯಾಗುತ್ತದೆ ಎಂದು ಸಮಿತಿ ಹೇಳಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












