ಲವ್ ಜಿಹಾದ್ ವಿರುದ್ದ ವಿಶ್ವ ಹಿಂದೂ ಪರಿಷದ್ ನಿಂದ ಶಾಲಾ- ಕಾಲೇಜುಗಳಲ್ಲಿ ಅಭಿಯಾನ!

0
1350

ಕಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದಾದ್ಯಂತ ಶಾಲಾಕಾಲೇಜುಗಳಲ್ಲಿ ಲವ್ ಜಿಹಾದ್ ನ್ನು ವಿರೋಧಿಸಿ ಅಭಿಯಾನವನ್ನು ನಡೆಸುವುದಾಗಿ ವಿಶ್ವ ಹಿಂದೂ ಪರಿಷದ್(ವಿಹೆಚ್ ಪಿ)ಹೇಳಿಕೆ ನೀಡಿದೆ.

ಈ ಅಭಿಯಾನದಲ್ಲಿ ವಿಶ್ವ ಹಿಂದು ಪರಿಷದ್, ಭಜರಂಗದಳ, ಮಹಿಳಾ ವಿಭಾಗ ಮತ್ತು ದುರ್ಗಾ ವಾಹಿನಿಗಳು ಪಾಲ್ಗೊಳ್ಳಲಿದ್ದು ಲವ್ ಜಿಹಾದ್ ನ ಹಾನಿಗಳ ಕುರಿತು ಯುವ ಜನರಲ್ಲಿ ಅರಿವು ಮೂಡಿಸಲು ಸಾಮಾಜಿಕ ಜಾಲತಾಣದಲ್ಲಿಯೂ ಪ್ರಚುರ ಪಡಿಸಲಿದೆ ಎಂದು ವಿಹೆಚ್ ಪಿಯ ಮಾದ್ಯಮ ಸಂಚಾಲಕರಾದ ಸೌರಿಷ್ ಮುಖರ್ಜಿಯವರು ಹೇಳಿಕೆ ನೀಡಿದ್ದಾರೆ.

” ಈ ತಿಂಗಳ ಮಧ್ಯಾವಧಿಯಲ್ಲಿ ನಾವು ರಾಜ್ಯದಾದ್ಯಂತ ಅಭಿಯಾನಕ್ಕೆ ಚಾಲನೆ ನೀಡಲಿದ್ದೇವೆ. ಈ ಅಭಿಯಾನದಲ್ಲಿ ಯಾವ ರೀತಿ ಹಿಂದು ಯುವತಿಯರನ್ನು ಪ್ರೀತಿಯ ಹೆಸರಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ಕುರಿತು ಮಾಹಿತಿ ನೀಡಲಿದ್ದೇವೆ. ಶಾಲಾ- ಕಾಲೇಜುಗಳಲ್ಲಿ ಈ ಅಭಿಯಾನಕ್ಕೆ ಸಂಬಂಧಿಸಿದಂತೆ ಕರಪತ್ರಗಳನ್ನು ಹಂಚಲಿದ್ದೇವೆ. ನಾವು ಪ್ರೀತಿಯ ವಿರುದ್ಧ ಯಾವುದೇ ರೀತಿಯ ವಿರೋಧವನ್ನು ಹೊಂದಿಲ್ಲವಾದರೆ ಪ್ರೀತಿಯ ಹೆಸರಲ್ಲಿ ಮತಾಂತರ ನಡೆಸುತ್ತಿರುವುದರ ವಿರುದ್ಧ ನಾವು ವಿರೋಧ ವ್ಯಕ್ತಪಡಿಸುತ್ತೇವೆ” ಎಂದು ಮುಖರ್ಜಿ ಹೇಳಿಕೆ ನೀಡಿದ್ದಾರೆ. ಇದಲ್ಲದೇ ಹೆತ್ತವರಲ್ಲಿಯೂ ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸಲು ತೀರ್ಮಾನಿಸಿರುವುದಾಗಿ ವಿಹೆಚ್ ಪಿ ನಾಯಕರೋರ್ವರು ತಿಳಿಸಿದ್ದಾರೆ.
ಆದರೆ ಈ ಅಭಿಯಾನದ ಕುರಿತು ಬಿಜೆಪಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಹಲವು ವರ್ಷಗಳಿಂದ ವಿಹೆಚ್ ಪಿ ಮತ್ತು ಆರ್ ಎಸ್ ಎಸ್ ಬಂಗಾಳದ ಜನರನ್ನು ಧರ್ಮದ ಆಧಾರದಲ್ಲಿ ವಿಂಗಡಿಸಲು ವಿಪುಲ ಯತ್ನ ನಡೆಸುತ್ತಲೇ ಇದೆ. ಸಂಘಪರಿವಾರದ ಒಡೆದು ಆಳುವ ನೀತಿಗೆ ಅಖಿಲ ಭಾರತೀಯ ತೃಣಮುಲ ಕಾಂಗ್ರೆಸ್( ಟಿಎಮ್‌ಸಿ ) ಯಾವುದೇ ಅವಕಾಶವನ್ನು ನೀಡದು ಎಂದು ಟಿಎಮ್‌ಸಿ ನಾಯಕ ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ