ಇಸ್ರೇಲ್ ಜತೆ ವ್ಯಾಪಾರ ಸಂಬಂಧ ನಿಲ್ಲಿಸಿದ ಟರ್ಕಿ

0
150

ಸನ್ಮಾರ್ಗ ವಾರ್ತೆ

ಇಸ್ತಾಂಬುಲ್ : ಗಾಝದಲ್ಲಿ ಕಾಯಂ ಕದನ ವಿರಾಮ ಆಗುವವರೆಗೆ ಇಸ್ರೇಲಿನೊಂದಿಗೆ ವ್ಯಾಪಾರ ವಹಿವಾಟಿಲ್ಲ ಎಂದು ಟರ್ಕಿ ಹೇಳಿದೆ.

ಎರಡು ದೇಶಗಳ ನಡುವೆ ಕಳೆದ ವರ್ಷ 680 ಕೋಟಿ ಡಾಲರ್ ವ್ಯಾಪಾರ ಆಗಿತ್ತು. ಇದರಲ್ಲಿ ಶೇ. 70ರಷ್ಟು ಟರ್ಕಿಯ ವ್ಯವಹಾರ ಆಗಿದೆ.

ಯುದ್ಧ ವಿರಾಮ ಆದರೂ ಅನಿಯಂತ್ರಿತವಾಗಿ ಗಾಝಕ್ಕೆ ಮಾನವೀಯ ಸಹಾಯ ಕೊಂಡು ಹೋಗಲು ಬಿಡುವವರೆಗೆ ಇಸ್ರೇಲ್‍ನೊಂದಿಗೆ ವ್ಯಾಪಾರ ಸಂಬಂಧ ಇಲ್ಲ ಎಂದು ಟರ್ಕಿ ವಾಣಿಜ್ಯ ಸಚಿವ ಓಮರ್ ಬೊಲಾತ್ ಹೇಳಿದರು.

ಸರ್ವಾಧಿಕಾರಿಯ ಕ್ರಮವನ್ನು ವಿರೋಧಿಸಬೇಕಾಗಿದೆ ಎಂದು ಟರ್ಕಿಯ ಅಧ್ಯಕ್ಷ ರಜಬ್ ತೈಯಿಬ್ ಉರ್ದುಗಾನ್‍ರನ್ನು ಇಸ್ರೇಲ್ ವಿದೇಶ ಸಚಿವ ಇಸ್ರೇಯೇಲ್ ಕಾಟ್ಸ್ ಹೇಳಿದರು.

LEAVE A REPLY

Please enter your comment!
Please enter your name here