ಮಧ್ಯಪ್ರದೇಶ:ಆದಿವಾಸಿ ವೃದ್ಧ ವ್ಯಕ್ತಿಗೆ ನಡು ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ ಬಿಜೆಪಿ ಯುವ ಮೊರ್ಚ ನಾಯಕ

0
276

ಸನ್ಮಾರ್ಗ ವಾರ್ತೆ

ಬೋಪಾಲ,ಸೆ. 21: ಮಧ್ಯಪ್ರದೇಶದ ಅನುಪುರ ಜಿಲ್ಲೆಯ ರಾಜೇಂದ್ರ ನಗರದಿಂದ ಅನಪ್ಪುರಕ್ಕೆ ಆದಿವಾಸಿ ಹಿರ್ವ ಸಿಂಗ್ ತನ್ನ ಗೆಳೆಯನೊಂದಿಗೆ ಬೈಕ್‍ನಲ್ಲಿ ಹೋಗುತ್ತಿದ್ದರು. ರಸ್ತೆ ಮಧ್ಯೆ ಬೈಕ್ ಪಿಕ್ ಅಪ್ ವ್ಯಾನ್‍ಗೆ ತಾಗಿದ್ದು ನಂತರ ಹಿರ್ವ ಸಿಂಗ್ ರಿಗೆ ಯುವ ಮೋರ್ಚದ ಸ್ಥಳೀಯ ಅಧ್ಯಕ್ಷ ಗಣೇಶ್ ದೀಕ್ಷಿತ್ ಮತ್ತು ಇನ್ನೊಬ್ಬ ಸೇರಿ ಹೊಡೆದಿದ್ದಾರೆ.

ಘಟನೆಯಲ್ಲಿ ಆಡಳಿತ ಪಕ್ಷ ಬಿಜೆಪಿ ವಿರುದ್ದ ಪ್ರತಿಭಟನೆ ತೀವ್ರವಾಗಿದ್ದು ಕಾಂಗ್ರೆಸ್ ಅಧ್ಯಕ್ಷ ಕಮಲನಾಥರು ಬಿಜೆಪಿ ಪರಿಶಿಷ್ಟ ಬುಡಕಟ್ಟು ಜನರಿಗೆ ಹೊಡೆಯುವ ಪಾರ್ಟಿಯಾಗಿ ಬದಲುಗೊಂಡಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಮುಖ್ಯಮಂತ್ರಿಗೆ ಇವೆಲ್ಲ ನಿಯಂತ್ರಿಸಲು ಆಗುವುದಿಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಮಧ್ಯ ಪ್ರದೇಶ ವಿಧಾನ ಸಭೆಗೆ ಚುನಾವಣೆ ಹತ್ತಿರದಲ್ಲಿರುವುದರಿಂದ ಬಿಜೆಪಿಯವರ ಇಂತಹ ವರ್ತನೆಗಳು ಮುಖ್ಯಮಂತ್ರಿ ಶಿವರಾಜ್ ಸಿಂಗ್‍ರು ಇನ್ನೊಮ್ಮೆ ಮುಖ್ಯಮಂತ್ರಿಯಾಗುವ ಪ್ರಯತ್ನಕ್ಕೆ ತಣ್ಣೀರೆರಚಿದಂತಾಗಿದೆ ಎಂದು ವರದಿಗಳು ತಿಳಿಸಿವೆ.

ಯುವ ಮೋರ್ಚದ ಗಣೇಶ್ ದೀಕ್ಷಿತ್ ಹೊಡೆದಿದ್ದ ಹಿರ್ವ ಸಿಂಗ್‍ರ ಜೊತೆಗಿದ್ದು ಇನ್ನೊಬ್ಬ ವ್ಯಕ್ತಿ ಪೆಟ್ಟು ತಿಂದ ನೋವಿನಿಂದ ರಸ್ತೆಯಲ್ಲಿಯೇ ಮಲಗಿದ್ದಾಗ ದೀಕ್ಷಿತ್ ವಯೋವೃದ್ಧ ಹಿರ್ವ ಸಿಂಗ್ ಮುಖಕ್ಕೆ ಚಪ್ಪಲಿಯಿಂದ ಹೊಡೆದಿದ್ದಾನೆ. ಪೊಲೀಸರು  ಗಣೇಶ ದೀಕ್ಷಿತನ ವಿರುದ್ಧ ಪರಿಶಿಷ್ಟ ವಿಭಾಗ ಪರಿಶಿಷ್ಟಜಾತಿ ದೌರ್ಜನ್ಯ ತಡೆ ಕಾನೂನು ಪ್ರಕಾರ ಕೇಸು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. 

ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಮನುಷ್ಯತ್ವವಿಲ್ಲದ ಇಂತಹ ದೌರ್ಜನ್ಯಗಳು ನಡೆಯುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು. ಇದೇ ವೇಳೆ ಗಣೇಶ್ ದೀಕ್ಷಿತ್‍ನನ್ನು ಪಕ್ಷದಿಂದ ವಜಾಗೊಳಿಸಲಾಗಿದ್ದು ಅವನ ಜೊತೆಗೆ ಇದ್ದವರು ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.