ಮಹಾರಾಷ್ಟ್ರ: ಶಾಲಾ ಹಾಸ್ಟೆಲಿನ 190 ವಿದ್ಯಾರ್ಥಿಗಳಲ್ಲಿ ಕೊರೋನ ದೃಢ

0
395
ಶಾರದಾ ಕ್ಯಾಲೆಂಡರ್ ನ ನಿಜರೂಪ

ಸನ್ಮಾರ್ಗ ವಾರ್ತೆ

ಮುಂಬೈ: ಮಹಾರಾಷ್ಟ್ರದಲ್ಲಿ ಪುನಃ ಕೊರೋನ ಹರಡುತ್ತಿದ್ದು ವಾಶಿಂ ಜಿಲ್ಲೆಯ ಒಂದು ಶಾಲಾ ಹಾಸ್ಟೆಲ್‍ನಲ್ಲಿ 190 ವಿದ್ಯಾರ್ಥಿಗಳಿಗೆ ರೋಗ ದೃಢಪಟ್ಟಿದೆಂದು ಇತ್ತೀಚೆಗಿನ ವರದಿ ತಿಳಿಸಿದೆ.

ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ವೈರಸ್ ಬಾಧೆ ಕಂಡು ಬಂದ ಹಿನ್ನೆಲೆಯಲ್ಲಿ ಶಾಲಾ ಪರಿಸರವನ್ನು ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಎರಡು ವಾರಗಳಿಂದ ಈ ಜಿಲ್ಲೆಯಲ್ಲಿ ಕೊರೋನ ಪೀಡಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ.

ಕಳೆದ 24 ಗಂಟೆಯಲ್ಲಿ 8,000ಕ್ಕೂ ಹೆಚ್ಚು ಮಂದಿಗೆ ಮಹಾರಾಷ್ಟ್ರದಲ್ಲಿ ಕೊರೋನ ದೃಢಪಟ್ಟಿದೆ. ಅಕ್ಟೋಬರಿನ ಬಳಿಕ ಇಷ್ಟು ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಇದೇ ಮೊದಲನೇ ಬಾರಿಯಾಗಿದೆ. ನಿನ್ನೆ 80 ಮಂದಿ ಕೊರೋನ ರೋಗಿಗಳು ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ರೋಗ ವ್ಯಾಪನ ಹೆಚ್ಚಿದುದರಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.