ಸನ್ಮಾರ್ಗ ವಾರ್ತೆ
ಮುಂಬೈ,ಅ.29: ಮುಖ್ಯಮಂತ್ರಿ ಸ್ಥಾನದ ಕುರಿತು ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆಯೊಳಗೆ ವಿವಾದ ಇದ್ದು ಶರದ್ ಪವಾರ್ರ ಎನ್ಸಿಪಿ ಕಿಂಗ್ ಮೇಕರ್ ಆಗಲಿದೆಯೇ ಎಂದು ಜನರಲ್ಲಿ ಕುತೂಹಲಕ್ಕೆ ಎಡೆ ಮಾಡಿದೆ.
2014ರಲ್ಲಿ ಬಹುಮತ ಇಲ್ಲದೆ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚಿಸಿತ್ತು. ಪವಾರ್ ಬೆಂಬಲ ನೀಡುವ ಭರವಸೆ ಇತ್ತು. ಅಂದು ಬಿಜೆಪಿ 122 ಸೀಟು ಗಳಿಸಿತ್ತು. 288 ಶಾಸಕರ ವಿಧಾನಸಭೆಯಲ್ಲಿ 145 ಮಂದಿಯ ಬಹುಮತ ಬೇಕು. ಫಡ್ನವಿಸ್ಗೆ 23 ಶಾಸಕರ ಬೆಂಬಲ ಬೇಕಿತ್ತು. 63 ಸದಸ್ಯರ ಶಿವಸೇನೆ ಪ್ರತಿಪಕ್ಷವಾಗಿತ್ತು.
ಎನ್ಸಿಪಿ ಸದಸ್ಯರ ಬೆಂಬಲದಲ್ಲಿ ಫಡ್ನವಿಸ್ ಸರಕಾರ ವಿಶ್ವಾಸ ಮತ ಗೆದ್ದಿತ್ತು. ನಂತರ ಬಿಜೆಪಿಗೆ ಶಿವಸೇನೆ ನಿಶ್ಶರ್ತ ಬೆಂಬಲ ನೀಡಿತ್ತು. ಎನ್ಸಿಪಿಯ ಗುಪ್ತಮತದಾನದಲ್ಲಿ ಸರಕಾರ ದೃಢವಲ್ಲ ಎಂದು ಭಾವಿಸಿದ ಬಿಜೆಪಿ ಶಿವಸೇನೆಯನ್ನು ತನ್ನ ಜೊತೆ ನಿಲ್ಲಿಸಿ ಸರಕಾರ ರಚಿಸಿತ್ತು. ಈ ಸಲ 2014ರ ಅದೇ ಪರಿಸ್ಥಿತಿ ಬರುವುದೋ ಎಂದು ಕಾದು ನೋಡಲಾಗುತ್ತಿದೆ.
ಬಿಜೆಪಿಗೆ ಶರದ್ ಪವಾರ್ ಬೆಂಬಲ ನೀಡುವರೇ. ಆದರೆ ಬಿಜೆಪಿ ತನಗೆ ದ್ರೋಹ ಮಾಡಿದ ರೋಷ ಜನರಲ್ಲಿದೆ ಎಂದು ಪವಾರ್ಗೆ ಗೊತ್ತಿದೆ. ಆದ್ದರಿಂದ ಪವಾರ್ ಬಿಜೆಪಿಗೆ ಬೆಂಬಲ ನೀಡುವರೆಂದು ಭಾವಿಸಲಾಗದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
2014ರಲ್ಲಿ ಪಾರ್ಟಿ ಒಡೆಯಬಹುದು ಎಂದು ಹೆದರಿಕೆಯಿಂದ ಕೊನೆಗೆ ಶಿವಸೇನೆ ಬಿಜೆಪಿ ಸರಕಾರಕ್ಕೆ ಬೆಂಬಲ ಘೋಷಿಸಿತ್ತು. ಶರದ್ ಪವಾರ್ ಹೊರತು ಪಡಿಸಿ ಸರಕಾರ ರಚಿಸುವ ದಾರಿ ಬಿಜೆಪಿಯ ಬಳಿಯಿಲ್ಲ. ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಹಟ ಹಿಡಿದರೆ. ದೂಸ್ರಾ ಇಲ್ಲದ ಸ್ಥಿತಿ ಬಿಜೆಪಿಯದ್ದಾಗಿದ್ದು ಶಿವಸೇನೆ, ಪವಾರ್, ಕಾಂಗ್ರೆಸ್ ದೋಸ್ತಿ ಸರಕಾರ ಅಸ್ತಿತ್ವಕ್ಕೆ ಬರಲಿದೆಯೇ ಎಂದು ಕಾದು ನೋಡಬೇಕಾಗಿದೆ.












