ಹೈದರಾಬಾದ್: ಪ್ರೇಮ ಸಂಬಂಧ ವಿರೋಧಿಸಿದ್ದಕ್ಕೆ ತಾಯಿಯನ್ನು ಕೊಂದು ಮೂರು ದಿವಸ ಮೃತದೇಹದ ಜೊತೆಗಿದ್ದ ಪುತ್ರಿ!

0
826

ಸನ್ಮಾರ್ಗ‌ ವಾರ್ತೆ

ಹೈದರಾಬಾದ್,ಅ.29: ಪ್ರೇಮ ಸಂಬಂಧವನ್ನು ವಿರೋಧಿಸಿದ ತಾಯಿಯನ್ನು ಪುತ್ರಿಯೇ ಕೊಂದು ಹಾಕಿದ ಘಟನೆ ಹೈದರಾಬಾದಿನ ಹಯಾತ್ ನಗರದಲ್ಲಿ ನಡೆದಿದೆ. ಅಕ್ಟೋಬರ್ ಹದಿನೆಂಟಕ್ಕೆ ಕೊಲೆ ಕೃತ್ಯ ನಡೆದಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಿಯಕರನ ಸಹಾಯದಲ್ಲಿ ಕೀರ್ತಿ ರೆಡ್ಡಿ ಎಂಬ 19 ವರ್ಷದ ಹುಡುಗಿ ತಾಯಿಯನ್ನು ಕೊಂದಿದ್ದಾಳೆ.

ಕೀರ್ತಿ ಮತ್ತು ಇಬ್ಬರು ಯುವಕರು ಹೊಂದಿರುವ ಸಂಬಂಧವನ್ನು ತಾಯಿ ರಜಿತಾ(39) ವಿರೋಧಿಸಿದ್ದರು. ಅಕ್ಟೋಬರ್ ಹದಿನೆಂಟರಂದು ಯುವಕರಲ್ಲೊಬ್ಬ ಕೀರ್ತಿಯ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮೃತದೇಹವನ್ನು ಮನೆಯಲ್ಲಿಟ್ಟೇ ಇಬ್ಬರೂ ಮೂರು ದಿವಸ ಒಟ್ಟಿಗಿದ್ದರು.

ಟ್ರಕ್ ಚಾಲಕರಾದ ಕೀರ್ತಿಯ ತಂದೆ ಶ್ರೀನಿವಾಸ ರೆಡ್ಡಿ ಮನೆಗೆ ಮರಳಿದಾಗ ಪತ್ನಿ ಕಂಡು ಬಂದಿಲ್ಲ. ನಂತರ ಪೊಲೀಸರಿಗೆ ದೂರು ನೀಡಿದ್ದರು. ತಾಯಿ ಕಾಣೆಯಾಗಿದ್ದಾರೆ ಎಂದು ತಂದೆಗೆ ಕೀರ್ತಿ ಹೇಳಿದ್ದಳು. ಕೀರ್ತಿಯ ಹೇಳಿಕೆಯಲ್ಲಿ ವ್ಯತ್ಯಾಸ ಗುರುತಿಸಿದ ಪೊಲೀಸರು ವಿವರವಾಗಿ ವಿಚಾರಣೆ ನಡೆಸಿದಾಗ ಕೊಲೆಯ ಸುರುಳಿ ಬಿಚ್ಚಿಕೊಂಡಿತ್ತು.