ಮಕ್ಕದ ಪ್ರಸಿದ್ಧ ಗಡಿಯಾರ ಗೋಪುರದ ಗಂಟೆ ಸ್ತಬ್ದ

0
782

ಜಿದ್ದ, ಜೂ.13: ಮಕ್ಕದ ಪ್ರಸಿದ್ಧ ಗಡಿಯಾರ ಸ್ತಬ್ದಗೊಂಡಿದ್ದು ತಾಂತ್ರಿಕ ಅಡಚಣೆಯಿಂದ ವಿದ್ಯುತ್ ಸರಬರಾಜು ನಿಂತದ್ದು ಗಂಟೆ ಸ್ತಬ್ದವಾಗಲು ಕಾರಣ ಎನ್ನಲಾಗಿದೆ. ಮಂಗಳವಾರ 6:30ಕ್ಕೆ ಘಟನೆ ನಡೆದಿತ್ತು.

ಮಕ್ಕದ ಕ್ಲಾಕ್ ಟವರ್ ಕಟ್ಟಡವು ದುಬೈಯ ಬುರ್ಜ್ ಖಲೀಫ ಟವರ್ ಗಿಂತ ಸ್ವಲ್ಪ ಚಿಕ್ಕದಾಗಿರುವ ಅತೀ ಎತ್ತರದ ಎರಡನೆ ಕಟ್ಟಡ ಆಗಿದೆ. ಇದರ ಎತ್ತರ 662 ಮೀಟರ್.(ಇದನ್ನು ಮಕ್ಕ ರಾಯಲ್ ಕ್ಲಾಕ್ ಟವರ್ ಎಂದು ಕರೆಯಲಾಗುತ್ತಿದೆ) ಜಗತ್ತಿನ ಅತ್ಯಂತ ವಿಸ್ತೀರ್ಣ ಇರುವ ಕಟ್ಟಡ ಸಮುಚ್ಚಯವೂ ಇದೇ ಆಗಿದೆ. ಇದರ ವಿಸ್ತೀರ್ಣ ಹದಿನೈದು ಲಕ್ಷ ಚದರ ಮೀಟರ್ ಆಗಿದೆ. ಐತಿಹಾಸಿಕ ಪ್ರಸಿದ್ಧ ಲಂಡನ್‍ನ ಬಿಗ್ ಬೆನ್ ಕ್ಲಾಕ್‍ಗಿಂತ ಆರುಪಟ್ಟು ಹೆಚ್ಚು ವ್ಯಾಸವನ್ನು ಈ ಕ್ಲಾಕ್ ಟವರ್ ಹೊಂದಿದೆ.