ಗಾಝ ಸಿಟಿ, ಜೂ.13: ಹೆತ್ತವರು ಇಲ್ಲದೆ ಪೂರ್ವ ಜೆರುಸಲೇಮ್ನ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿದ್ದ ಫೆಲಸ್ತೀನಿನ ಬಾಲಕಿ ಆಯಿಷಾ ಲುಲು ಕೊನೆಯುಸಿರೆಳೆದಿದ್ದಾಳೆ. ಒಂದು ವಾರದಿಂದ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಕ್ರಿಯೆಗೆ ಕರೆತರಲಾದ ಮಗು ತಂದೆ, ತಾಯಿಯನ್ನು ಕಾಣದೆ ಅಳುತ್ತಿತ್ತು. ಪ್ರತೀ ದಿವಸ ಮಗು ಹೆತ್ತವರಿಗಾಗಿ ಅಳುತ್ತಲೇ ಇದ್ದರೂ ಮಗುವಿನ ಆಕ್ರಂದನಕ್ಕೆ ಯಾರೂ ಸ್ಪಂದಿಸಲಿಲ್ಲ. ಗಾಝ ದಿಗ್ಬಂಧದೆಡೆಯಲ್ಲಿ ಆಯಿಷಾಳನ್ನು ಪೂರ್ವ ಜೆರುಸಲೇಂಗೆ ಕರೆತರಲಾಗಿತ್ತು. ಆಯಿಷಾಳ ತಂದೆ ತಾಯಿಯನ್ನು ಅವಳೊಂದಿಗೆ ಆಸ್ಪತ್ರೆಗೆ ಹೋಗಲು ಇಸ್ರೇಲಿನ ಅಧಿಕಾರಿಗಳು ಬಿಡಲಿಲ್ಲ. ಅವರ ಬದಲಾಗಿ ಓರ್ವರನ್ನು ಮಗುವಿನ ಜೊತೆ ಹೋಗಲು ಬಿಟ್ಟರು. ಅವಳ ಆರೋಗ್ಯ ಚಿಂತಾಜನಕವಾದಾಗ ಮಗುವನ್ನು ಪುನಃ ಗಾಝಕ್ಕೆ ತಂದು ಬಿಡಲಾಯಿತು. ಒಂದು ವಾರ ಚಿಕಿತ್ಸೆಯೂ ಇಲ್ಲದೆ ಆಯಿಷಾ ಕೊನೆಯುಸಿರೆಳೆದಿದ್ದಾಳೆ. ಆ ಬಾಲಕಿಯೊಂದಿಗೆ ಇಸ್ರೇಲ್ ತೋರಿಸಿದ ಕ್ರೌರ್ಯಕ್ಕೆ ಎಂತಹ ಕಲ್ಲೆದೆಯವರ ಕಣ್ಣೂ ಮಂಜಾಗದಿರಲಾರದು.
ಆಸ್ಪತ್ರೆಯ ಬೆಡ್ನಲ್ಲಿ ಬ್ಯಾಂಡೇಜುಗಳು ಹೊದ್ದಿದ್ದ ಆಯಿಷಾ ನಗುವ ಚಿತ್ರವೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆಯಿಷಾಳ ವಿದಾಯ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವಳ ತಂದೆ ವಸೀಂ ಲುಲು ಹೇಳಿದ್ದಾರೆ. ನಮ್ಮ ಮನೆಯಿಂದ ಒಂದು ಗಂಟೆಯಷ್ಟು ದೂರದ ಜೆರುಸಲೇಂಗೆ ಹೋಗಲು ಬಿಡಲಿಲ್ಲ. ಆದರೆ ಅವಳು ಆಸ್ಪತ್ರೆಯಲ್ಲಿದ್ದಾಗ ನಾವು ಯಾವುದೋ ಬೇರೆ ಗೃಹದಲ್ಲಿದ್ದಂತೆ ಅನಿಸಿತು.
ಅನಾರೋಗ್ಯವಿರುವ ಸ್ವಂತ ಮಗುವನ್ನು ಅಪರಿಚಿತರ ಜೊತೆ ಆಸ್ಪತ್ರೆಗೆ ಕಳುಹಿಸುವುದು ಒಮ್ಮೆಯೂ ಸಹಿಸಲು ಸಾಧ್ಯವಿಲ್ಲ. ಆಯಿಷಾರ ಜೊತೆ 75 ವರ್ಷ ವಯಸ್ಸಾದ ಅಜ್ಜಿಯನ್ನು ಕಳುಹಿಸಲು ಅನುಮತಿ ಕೇಳಿದರೂ ಇಸ್ರೇಲ್ ಅನುಮತಿಸಲಿಲ್ಲ. ಗಾಝ ದಿಗ್ಬಂಧದ ನೆಪದಲ್ಲಿ ಹೆತ್ತವರನ್ನು ಮಗುವಿನ ಜೊತೆ ಕಳುಹಿಸಿಕೊಡಲು ಇಸ್ರೇಲ್ ಅಧಿಕಾರಿಗಳು ಬಿಡಲಿಲ್ಲ. ಹದಿನೆಂಟು ಮಕ್ಕಳ ಸಹಿತ 600ಕ್ಕೂ ಹೆಚ್ಚು ರೋಗಿಗಳು ಗಾಝದ ಹೊರಗೆ ಚಿಕಿತ್ಸೆಗೆ ಹೋಗುವಾಗ ಹೆತ್ತವರನ್ನೂ ಕಳುಹಿಸಿಕೊಡಬೇಕೆಂದು ಇಸ್ರೇಲಿಗೆ ಮನವಿ ನೀಡಿದರೂ ಇಸ್ರೇಲ್ ನಿಷ್ಕರುಣೆಯಿಂದ ವರ್ತಿಸಿದೆ.












