ಮಸ್ಜಿದುಲ್ ಹರಾಮ್ ಮತ್ತು ನ್ನಬವಿಗಳಲ್ಲಿ ಸ್ಥಿತಿಗತಿ ಶೀಘ್ರ ಸುಧಾರಿಸಬಹುದು: ಅಬ್ದುರ್ರಹ್ಮಾನ್ ಅಲ್ ಸುದೈಸ್

0
1284

ಸನ್ಮಾರ್ಗ ವಾರ್ತೆ

ಮಕ್ಕ, ಏಪ್ರಿಲ್. 30: ಕೊರೊನಾ ಹಿನ್ನೆಲೆಯಲ್ಲಿ ಬಂದ್ ಮಾಡಿಡಲಾದ ಮಕ್ಕ, ಮದೀನದ ಪವಿತ್ರ ಮಸೀದಿಗಳಲ್ಲಿ ಪರಿಸ್ಥಿತಿ ಬೇಗನೆ ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ಎರಡು ಹರಮ್‍ಗಳ ಕಾರ್ಯಾಲಯಗಳ ಮುಖ್ಯಸ್ಥ ಡಾ. ಅಬ್ದುರ್ರಹ್ಮಾನ್ ಅಲ್ ಸುದೈಸ್ ಹೇಳಿದರು. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ಮೇಲೆ ಎಲ್ಲರೂ ಒಳಗೆ ಬರಬಹುದು. ಕಅಬದ ಸಮೀಪದ ಪ್ರದಕ್ಷಿಣೆಯನ್ನು ಕೂಡಲೇ ಅನುಮತಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಮಕ್ಕ ಮದೀನ ಪರಿಸ್ಥಿತಿ ಕೂಡಲೇ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಎರಡರ ಬಳಿ ಹೆಚ್ಚಿನ ಉಪಕರಣಗಳನ್ನು ಸ್ಥಾಪಿಸಲಾಗಿದೆ. ಹರಮನ್ನು ತೆರೆದರೆ ಕಠಿಣವಾದ ಕೊರೊನಾ ಪ್ರತಿರೋಧ ತಪಾಸಣೆ ಮಾಡಿದ ಬಳಿಕ ಮಸೀದಿಗಳ ಒಳಗೆ ಬಿಡಲಾಗುತ್ತದೆ. ಕೊರೊನಾ ಪ್ರತಿರೋಧದ ಭಾಗವಾಗಿ ಹರಂ ಮಸೀದಿಯ ಬಳಿ ಸ್ಥಾಪಿಸಲಾದ ವಿವಿಧ ತರ್ಮಲ್ ಸ್ಕಾನಿಂಗ್ ಉಪಕರಣಗಳು, ಓಝೋನ್ ಸ್ಟೆರಿಲೈಸೇಶನ್ ಉಪಕರಣಗಳನ್ನು ಸ್ಥಾಪಿಸುವುದನ್ನು ನೇರವಾಗಿ ನೋಡಿದ ಬಳಿಕ ಅವರು ಹೀಗೆ ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.