ಸನ್ಮಾರ್ಗ ವಾರ್ತೆ
ಇಸ್ಮತ್ ಪಜೀರ್


ಈ ಚಿತ್ರದಲ್ಲಿ ನನ್ನ ಕೈಯಲ್ಲಿರುವ ಟೆಸ್ಟ್ ಟ್ಯೂಬ್ ಗಮನಿಸಿ.. ಅದೇ ಟೆಸ್ಟ್ ಟ್ಯೂಬನ್ನು (ಪ್ರನಾಳ) ಸ್ಟ್ಯಾಂಡ್‌ನಲ್ಲೂ ಇಟ್ಟಿರುವೆ. ಇದು ಸೆಂಟ್ರಿಫ್ಯೂಜ್ ಎಂಬ ಯಂತ್ರದಲ್ಲಿ ಸೆಂಟ್ರಿಫ್ಯುಗೇಶನ್ ಮಾಡಲಾದ ರಕ್ತ.
ಇದರಲ್ಲಿ ಮೂರು ಭಾಗಗಳಿವೆ.
ಕೆಳಗಿನ ಕೆಂಪು ಭಾಗ ಕೆಂಪು ರಕ್ತ, ಮೇಲಿನ ನಸುಹಳದಿ ಭಾಗ ಪ್ಲಾಸ್ಮಾ ಅಥವಾ ಸೀರಮ್ (ಸೀರಮ್ ಮತ್ತು ಪ್ಲಾಸ್ಮಾಕ್ಕೆ ಸಣ್ಣ ವ್ಯತ್ಯಾಸವಿದೆ) ಕೆಂಪು ರಕ್ತ ಮತ್ತು ಪ್ಲಾಸ್ಮಾವನ್ನು ಪ್ರತ್ಯೇಕಿಸುವ ತೆಳುವಾದ ಒಂದು ಪದರವಿದೆ. ಅದನ್ನು ಬಫಿ ಕೋಟ್ ಎನ್ನುತ್ತೇವೆ. ರಕ್ತವನ್ನು ನೇರವಾಗಿ ಟೆಸ್ಟ್ ಟ್ಯೂಬಿಗೆ ಹಾಕಿ ಹೆಪ್ಪುಗಟ್ಟಿಸಿ ಆ ಬಳಿಕ ಸೆಂಟ್ರಿಫ್ಯೂಜ್ ಮಾಡಿದಾಗ ಸಿಗುವ ನಸುಹಳದಿ ಭಾಗವನ್ನು ಸೀರಮ್ ಎನ್ನುತ್ತೇವೆ. ರಕ್ತ ಹೆಪ್ಪುಗಟ್ಟದಂತೆ ತಡೆಯುವ ಯಾವುದಾದರೂ ರಸಾಯನಿಕ ದ್ರಾವಣವನ್ನು ಮಿಶ್ರ ಮಾಡಿ ಸೆಂಟ್ರಿಫ್ಯೂಜ್ ಮಾಡಿದ ಬಳಿಕ ಮೇಲ್ಬಾಗದಲ್ಲಿ ಬರುವ ನಸುಹಳದಿ ಭಾಗವನ್ನು ಪ್ಲಾಸ್ಮಾ ಎನ್ನುತ್ತೇವೆ.
ಇದೀಗ ಕೋವಿಡ್-19ಕ್ಕೆ ಪ್ಲಾಸ್ಮಾ ಥೆರಪಿ ಎಂಬ ಚಿಕಿತ್ಸೆಯ ಕುರಿತ ಚರ್ಚೆ ನಡೆಯುತ್ತಿದೆ. ಕೆಲವೆಡೆ ಅದು ಪ್ರೊಸೆಸ್‌ನಲ್ಲಿದ್ದರೂ ಕೆಲವೆಡೆ ಇನ್ನೂ ಅದು ಬೇಕೇ ಬೇಡವೇ ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಅದು ಯಶಸ್ವಿಯಾದಲ್ಲಿ ಕಡಿಮೆ ಖರ್ಚಿನಲ್ಲಾಗಬಹುದು.
ಕೋವಿಡ್ 19 ಚಿಕಿತ್ಸೆಯಲ್ಲಿ ಈಗಾಗಲೇ ಕೋವಿಡ್ 19 ಬಾಧಿಸಿ ಗುಣಮುಖರಾದವರ ಪ್ಲಾಸ್ಮಾ ಹೆಚ್ಚು ಉಪಕಾರಿಯಾಗಬಲ್ಲುದು ಎಂಬುವುದು ವೈದ್ಯರುಗಳ ಅಭಿಮತ. ಯಾಕೆಂದರೆ ಈಗಾಗಲೇ ಗುಣಮುಖರಾದವರ ಪ್ಲಾಸ್ಮಾವು ಕೋವಿಡ್‌ನೊಂದಿಗೆ ಸೆಣಸಲು ಹೆಚ್ಚು ಉಪಯುಕ್ತವಾಗಬಲ್ಲುದು. ಅದು ಒಂದು ವಿಧದಲ್ಲಿ ವಿಷದ ಹಾವು ಕಡಿತದ ಚಿಕಿತ್ಸೆಗೆ ಬಳಸಲಾಗುವ ಚುಚ್ಚುಮದ್ದಿನಲ್ಲಿ ಅಂದರೆ ವಿಷನಿರೋಧಕ ಚಿಕಿತ್ಸೆಗೆ ವಿಷವನ್ನೇ ಬಳಸಿದಂತೆ..
ಯಾವ ಸಮೂಹದ ಮೇಲೆ ಕೋವಿಡ್ ಹಬ್ಬಿಸುವವರು ಎಂಬ ಸುಳ್ಳು ಆರೋಪವನ್ನು ನಮ್ಮ ದೇಶದಲ್ಲಿ ಹೊರಿಸಲಾಗುತ್ತಿದೆಯೋ ಅವರು ಇಂದು ಚಿಕಿತ್ಸೆಗಾಗಿ ಸ್ವಯಂ ಪ್ರೇರಿತರಾಗಿ ಪ್ಲಾಸ್ಮಾ ದಾನಕ್ಕೆ ಮುಂದಾಗುತ್ತಿದ್ದಾರೆ. ಈಗ ಅವರೇ ದೇಶಕ್ಕೆ ಉಪಕಾರಿ ಎಂದು ಸಾಬೀತಾಗುತ್ತಿದೆ. ನಾಳೆ ಕಟ್ಟಕಡೆಯದಾಗಿ ಪ್ಲಾಸ್ಮಾ ಥೆರಪಿಯೇ ಬೇಕೆಂದಾಗಿಬಿಟ್ಟರೆ ತಬ್ಲೀಗೀ ಜಿಹಾದಿಗಳ ಪ್ಲಾಸ್ಮಾ ಅವರನ್ನು ವಿನಾಕಾರಣ ಟಾರ್ಗೆಟ್ ಮಾಡಿದವರಿಗೂ ಬೇಕಾಗಿ ಬರಬಹುದು. ಇಂದು ನಮ್ಮ ಜಿಲ್ಲೆಯ (ಮಂಗಳೂರು )ಯಾವ ಆಸ್ಪತ್ರೆಯ ಬ್ಲಡ್ ಬ್ಯಾಂಕಿಗೆ ಹೋಗಿ ವಿಚಾರಿಸಿದರೂ ನಿಮಗೆ ಸಿಗುವ ಆಶ್ಚರ್ಯದಾಯಕ ಮಾಹಿತಿಯೆಂದರೆ ಅತೀ ದೊಡ್ಡ ಸಂಖ್ಯೆಯ ಪ್ರಾಣ ರಕ್ಷಕರು ಅರ್ಥಾತ್ ರಕ್ತದಾನಿಗಳು ಮುಸ್ಲಿಮರು..
ಮುಸ್ಲಿಮರು ಒಂದು ವಿಧದಲ್ಲಿ ಸಿಹಿಯಾದ ಫಲ ನೀಡುವ ಹಣ್ಣುಗಳಿದ್ದಂತೆ.. ನೀವೆಷ್ಟು ಕಲ್ಲು ಹೊಡೆಯುತ್ತೀರೋ ಅಷ್ಟು ಹೆಚ್ಚು ಅವು ನಿಮಗೆ ಫಲ ನೀಡುತ್ತವೆ. ಅಂತಹ ಜನೋಪಕಾರಿ ಸಮುದಾಯದವನೆನ್ನಲು ನಾನು ಹೆಮ್ಮೆಪಡುವೆ..
( ಲೇಖಕರು- ದೇರಳಕಟ್ಟೆ ಡಯೋಗ್ನೋಸ್ಟಿಕ್ಸ್ ಎಂಡ್ ಪಾಲಿ ಕ್ಲಿನಿಕ್, ದೇರಳಕಟ್ಟೆ , ಮಂಗಳೂರು ಇದರ ನಿರ್ದೇಶಕರಾಗಿದ್ದಾರೆ.)
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.ಕ್ಷಿ












