ಉತ್ತರ ಪ್ರದೇಶ: ತಾಯಿ ಸಹಿತ ನಾಲ್ವರು ಮಹಿಳೆಯರ ಕೊಲೆ ಮಾಡಿದ ವ್ಯಕ್ತಿಯ ಬಂಧನ

0
487

ಸನ್ಮಾರ್ಗ ವಾರ್ತೆ

ಲಕ್ನೊ,ಅ.30: ತಾಯಿಯ ಸಹಿತ ನಾಲ್ವರು ಮಹಿಳೆಯರನ್ನು ಕ್ರೂರವಾಗಿ ಕೊಲೆ ಮಾಡಿದ ವ್ಯಕ್ತಿಯನ್ನು ಉತ್ತರ ಪ್ರದೇಶ ಮೈನ್ ಪುರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸರ್ವೇಶ್ ಯಾದವ್ ಮನೋರೋಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು. ಪುದಿ ದೇವಿ ಎಂಬ 38 ವರ್ಷದ ಮಹಿಳೆಯ ತಲೆ ಕತ್ತರಿಸಿ 14 ತುಂಡುಗಳಾಗಿ ಮಾಡಿ ಹೂತು ಹಾಕಿದ ಪ್ರಕರಣದಲ್ಲಿ ಈತ ಈಗ ಬಂಧನಕ್ಕೊಳಾಗಿದ್ದು, ಮೃತದೇಹವನ್ನು ಗೋಣಿಯಲ್ಲಿ ಕಟ್ಟಿದ ಸ್ಥಿತಿಯಲ್ಲಿ ಮಾಲಿನ್ಯ ಕೇಂದ್ರದಲ್ಲಿ ಪತ್ತೆಹಚ್ಚಲಾಗಿದೆ. ಈ ಕೊಲೆಯಲ್ಲಿ ಈತನ ಮಾವನೂ ಬಂಧನಕ್ಕೊಳಗಾಗಿದ್ದಾನೆ.

ಮಾವನನ್ನು ಮದುವೆಯಾಗಬೇಕೆಂದು ಪುದಿ ದೇವಿಯೊಂದಿಗೆ ಸರ್ವೇಶ್ ಹೇಳಿದ್ದ. ಅದಕ್ಕೆ ಪುದಿದೇವಿ ಒಪ್ಪಲಿಲ್ಲ. ಆಕೆಯನ್ನು ಈತ ಕೊಲೆ ಮಾಡಿದ್ದಾನೆ. ಕಳೆದ ಮೇ ತಿಂಗಳಲ್ಲಿ ಸರ್ವೇಶ್ ತಾಯಿಯನ್ನು ಕೊಲೆ ಮಾಡಿದ್ದ. ತಾನು ಮಾಡಿದ ಕೊಲೆಗಳು ತಾಯಿಗೆ ಗೊತ್ತಾದ ನಂತರ ಈತ ತಾಯಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ. 20 ವರ್ಷದ ಹಿಂದೆ ಸರ್ವೇಶ್ ಮೊದಲ ಕೊಲೆ ಮಾಡಿದ್ದ. ಅಂದು ಅಹ್ಮದಾಬಾದಿನ ಒಬ್ಬ ಯುವತಿ ಈತನಿಗೆ ಬಲಿಯಾಗಿದ್ದಳು.