ಇಬ್ಬರು ಮಕ್ಕಳನ್ನು ನಾಲ್ಕನೆ ಮಹಡಿಯಿಂದ ಹೊರಗೆಸೆದ ವ್ಯಕ್ತಿಯ ಬಂಧನ; 2 ವರ್ಷದ ಮಗು ಸಾವು

0
771

ಸನ್ಮಾರ್ಗ ವಾರ್ತೆ

ಕೊಲ್ಕತಾ,ಜೂ.15: ಎರಡು ಮಕ್ಕಳನ್ನು ನಾಲ್ಕನೆ ಮಹಡಿಯಿಂದ ಹೊರಗೆಸೆದ ಘಟನೆ ಕೊಲ್ಕತಾದಲ್ಲಿ ನಡೆದಿದ್ದು, ಘಟನೆಯಲ್ಲಿ ಎರಡು ವರ್ಷದ ಗಂಡು ಮಗು ದಾರುಣವಾಗಿ ಸಾವನ್ನಪ್ಪಿದ ಕೊಲ್ಕತಾದ ಬುರ್ರಬಝಾರಿನಲ್ಲಿ ಕ್ರೂರಕೃತ್ಯವೆಸಗಿದ 55 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಟ್ಟಡದಲ್ಲಿ ವಾಸವಿದ್ದ ಆರು ಮತ್ತು ಎರಡು ವರ್ಷದ ಮಕ್ಕಳನ್ನು ಮಧ್ಯವಯಸ್ಕ ವ್ಯಕ್ತಿ ಕೆಳಗೆ ಎಸೆದನು. ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಆರು ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಕ್ಕಳ ತಂದೆಯೊಂದಿಗೆ ದುಷ್ಕರ್ಮಿಗೆ ಹಣಕಾಸು ವ್ಯವಹಾರ ಇತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.