ಮಂಗಳೂರು ಗೋಲಿಬಾರ್ ಗೆ ಎರಡು ವರ್ಷ: ಕ್ಯಾಂಪಸ್ ಫ್ರಂಟ್ ನಿಂದ ಪೋಲಿಸ್ ದೌರ್ಜನ್ಯದ ಪ್ರತಿಭಟನಾ ಪ್ರದರ್ಶನ

0
124

ಸನ್ಮಾರ್ಗ ವಾರ್ತೆ

ಮಂಗಳೂರು: 2019 ರ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಸಿಎಎ, ಎನ್ಆರ್ ಸಿ ವಿರುದ್ದ ಶಾಂತಿಯುತ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ನಡೆದ ಗೋಲಿಬಾರ್ ಗೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರ ಜಿಲ್ಲಾಧ್ಯಕ್ಷ ಶರಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ಜಿಲ್ಲಾ ಮುಖಂಡರಾದ ಅರ್ಫೀದ್ ಅಡ್ಕಾರ್, ರಿಯಾಝ್ ಅಂಕತ್ತಡ್ಕ, ಅಶ್ಫಕ್ ಬಂಟ್ವಾಳ, ಫಯಾಝ್ ವಿಟ್ಲ, ಸರ್ಫರಾಝ್ ಅಂಗರಗುಂಡಿ, ಮುಕ್ತಾರ್ ಕಲ್ಲಡ್ಕ ಉಪಸ್ಥಿತರಿದ್ದರು.

ಜಿಲ್ಲಾ ಮುಖಂಡ ಶಂಸುದ್ದೀನ್ ನಿರೂಪಿಸಿದರು. ಇದೇ ವೇಳೆ ಪ್ರತಿಭಟನಾ ಸ್ಥಳದಲ್ಲೇ ಗೋಲಿಬಾರ್ ನಡೆಸಿದ ಘಟನೆಯನ್ನು ಅಣುಕು ಪ್ರದರ್ಶನದ ಮೂಲಕ ಮತ್ತೆ ಪೊಲೀಸ್ ಕ್ರೌರ್ಯತೆಯನ್ನು ನೆನಪಿಸಲಾಯಿತು.

SHARE
Previous articleIssue 34 PDF
Next articleIssue 35 PDF