ಮಂಗಳೂರು – ಲಕ್ಷದ್ವೀಪ ಪ್ರಯಾಣಿಕ ಹಡಗು ಮರು ಆರಂಭ

0
278

ಸನ್ಮಾರ್ಗ ವಾರ್ತೆ

ಮಂಗಳೂರು: ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಲಕ್ಷದ್ವೀಪದಿಂದ ಮಂಗಳೂರಿಗೆ ಹಡಗು ಸೇವೆ ಪುನರಾರಂಭಗೊಂಡಿದೆ.

ಹಳೆ ಮಂಗಳೂರು ಬಂದರಿನಲ್ಲಿ 160 ಪ್ರಯಾಣಿಕರಿದ್ದ ‘MSV ಪರಾಲಿ’ ಎಂಬ ಹೈಸ್ಪೀಡ್ ಹಡಗು ಲಂಗರು ಹಾಕಿದೆ. ಪ್ರಯಾಣದ ಸಮಯವನ್ನು ಹಿಂದಿನ 13 ಗಂಟೆಗಳಿಂದ ಏಳು ಗಂಟೆಗಳಿಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ಷದ್ವೀಪದ ಕಡಮತ್, ಕಿಲ್ತಾನ್ ದ್ವೀಪಗಳು ಕರ್ನಾಟಕದ ಬಂದರು ನಗರವನ್ನು ಸಂಪರ್ಕಿಸಿ ಸರ್ವಿಸ್ ನಡೆಸುತ್ತಿದ್ದು. ಪೈಲಟ್, ಚೀಫ್ ಇಂಜಿನಿಯರ್ ಅಸಿಸ್ಟೆಂಟ್ ಇಂಜಿನಿಯರ್ ಸಹಿತ ಎಂಟು ಅಧಿಕಾರಿಗಳು ಹಡಗಿನ ಸಿಬ್ಬಂದಿಗಳಾಗಿದ್ದಾರೆ.

ಟಿಕೆಟು ದರ ಕೇವಲ 650 ರೂಪಾಯಿ ಆಗಿದ್ದು ಶನಿವಾರ ಮಂಗಳೂರಿನಿಂದ ಕಿಲ್ತಾನಿಗೆ ಹಡಗು ಮರು ಸೇವೆ ನೀಡಲಿದೆ.

ಇಲ್ಲಿಗೆ ಚಿಕಿತ್ಸೆಗಾಗಿ ಬಂದಿದ್ದ ನಸೀಬ್ ಖಾನ್ ಮಾತನಾಡಿ, ನೌಕಾಯಾನ ಸೇವೆ ಆರಂಭವಾಗುವುದರಿಂದ ಮಂಗಳೂರಿನಲ್ಲಿ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಲಕ್ಷದ್ವೀಪಕ್ಕೆ ಪ್ರವಾಸಿಗರು ಮುಖ್ಯವಾಗಿ ಕೊಚ್ಚಿಯಿಂದ ಹಡಗು ಅಥವಾ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಆದರೆ, ಲಕ್ಷದ್ವೀಪಕ್ಕೂ ಮಂಗಳೂರಿಗೂ ಅವಿನಾಭಾವ ಸಂಬಂಧವಿದೆ. ಕೊಚ್ಚಿಯಿಂದ ಲಕ್ಷದ್ವೀಪಕ್ಕೆ 391 ಕಿಮೀ ಮತ್ತು ಮಂಗಳೂರಿನಿಂದ 356 ಕಿಮೀ ದೂರವಿದೆ.

LEAVE A REPLY

Please enter your comment!
Please enter your name here