ಬಡವರಲ್ಲ, ಅಭಿವೃದ್ಧಿಶೀಲ ದೇಶಗಳಿಗೆ ಕೊಡುವ ಪರಿಗಣನೆ ನಮಗೆ ಬೇಡ ಎಂದ ದಕ್ಷಿಣ ಕೊರಿಯಾ

0
440

ಸನ್ಮಾರ್ಗ ವಾರ್ತೆ

ಸಿಯೋಲ್,ಅ.26: ವಿಶ್ವ ವ್ಯಾಪಾರ ಸಂಘಟನೆ ಅಭಿವೃದ್ಧಿಶೀಲ ದೇಶಗಳಿಗೆ ಕೊಡುವ ವಿಶೇಷ ಪರಿಗಣನಗೆ ನಮಗೆ ಬೇಡ ಎಂದು ದಕ್ಷಿಣ ಕೊರಿಯದ ವಿತ್ತ ಸಚಿವ ಹೊಮ್ ನಮ್ ಕಿ ಹೇಳಿದ್ದಾರೆ. ಆದರೆ, ವಿಶ್ವ ವ್ಯಾಪಾರ ಸಂಘಟನೆಯ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲೇ ಇರುತ್ತೇವೆ. ಆದರೂ ಸಂಘಟನೆಯ ವಿಶೇಷ ಸಹಾಯದ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

ಕಳೆದ ಜುಲೈಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ವ್ಯಾಪಾರ ಸಂಘಟನೆಯ ಅಭಿವೃದ್ಧಿ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಕುರಿತ ಮಾನದಂಡವನ್ನು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದರು. ಚೀನಕ್ಕೆ ಸಂಘಟನೆ ಕೊಡುತ್ತಿರುವ ಪರಿಗಣನೆಯನ್ನು ಸೂಚಿಸಿ ಹೀಗೆ ಹೇಳಿದ್ದರು. ವ್ಯಾಪಾರ ಸಂಘಟನೆ ರೂಪುಗೊಂಡ 1995ರಿಂದ ದಕ್ಷಿಣ ಕೊರಿಯಾ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿದೆ. ಇಲ್ಲಿನ ಕೃಷಿಕ್ಷೇತ್ರಕ್ಕೆ ವಿಶ್ವ ವ್ಯಾಪಾರ ಸಂಘಟನೆ ಮುಖ್ಯವಾಗಿ ಸಹಾಯವನ್ನು ನೀಡುತ್ತಿದೆ.