ಬಿಜೆಪಿ ಸರಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯುವೆವು- ಅಸ್ಸಾಮ ಮಾಜಿ ಮುಖ್ಯಮಂತ್ರಿ ಮೊಹಂತ

0
3772

ಸನ್ಮಾರ್ಗ ವಾರ್ತೆ-

ಗುವಾಹಟಿ, ಡಿ. 16: ಪೌರತ್ವ ತಿದ್ದುಪಡಿಯನ್ನು ತನ್ನ ಪಕ್ಷ ಬೆಂಬಲಿಸಿದ್ದು ದುರದೃಷ್ಟಕರವಾಗಿದೆ ಮತ್ತು ಅಸ್ಸಾಮನಲ್ಲಿ ಬಿಜೆಪಿ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಅಸ್ಸಾಂ ಮಾಜಿ ಮುಖ್ಯಮಂತ್ರಿ ಅಸ್ಸಾಮ ಗಣಪರಿಷತ್(ಎಜಿಪಿ) ನಾಯಕ ಹಾಗೂ ಶಾಸಕ ಪ್ರಫುಲ್ಲ ಕುಮಾರ್ ಮೊಹಂತ ಹೇಳಿದರು. ಅಸ್ಸಾಮನಲ್ಲಿ ಆಡಳಿತ ಪಕ್ಷ ಬಿಜೆಪಿಯೊಂದಿಗೆ ಎಜಿಪ್ ಸಖ್ಯದಲ್ಲಿದೆ. ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ, ರಾಜ್ಯಸಭೆಗಳಲ್ಲಿ ಎಜಿಪಿ ಬೆಂಬಲ ಸೂಚಿಸಿ ಮತಹಾಕಿತ್ತು. ಇದು ದುರದೃಷ್ಟಕರ ಎಂದು ಮೊಹಂತ ಹೇಳಿದರು. ಅಸ್ಸಾಂನ ಬಿಜೆಪಿ ಸರಕಾರಕ್ಕೆ ಬೆಂಬಲ ಹಿಂಪಡೆಯುವ ಕುರಿತು ತನ್ನ ಪಾರ್ಟಿ ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದರು. ಪ್ರಧಾನಿ, ಗೃಹ ಸಚಿವರು ಅಸ್ಸಾಮ್ ನ ಜನರ ಕುರಿತು ಯೋಚಿಸಬೇಕು. ಪೌರತ್ವ ಕಾನೂನು ಅಸ್ಸಾಂನಲ್ಲಿ ಜಾರಿಗೊಳಿಸಬಾರದು. ಜಾರಿಗೊಳಿಸಲು ನಾವು ಬಿಡುವುದಿಲ್ಲ ಎಂದು ಮೊಹಂತ ಹೇಳಿದರು.

ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಅತ್ಯಂತ ತೀಕ್ಷ್ಣ ಹೋರಾಟ ಅಸ್ಸಾಂನಲ್ಲಿ ಮುಂದುವರಿಯುತ್ತಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಮೂವರು ಕೊಲ್ಲಲ್ಪಟ್ಟಿದ್ದರು.