ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 7: ಮೀಡಿಯ ವನ್ ,ಏಷ್ಯನೆಟ್ ನ್ಯೂಸ್ ಚಾನೆಲ್ ಗೆ ನಿಷೇಧ ಹೇರಿದ ಘಟನೆಯಲ್ಲಿ ಪ್ರಧಾನಿ ವಿಷಾದ ಸೂಚಿಸಿದ್ದಾರೆ ಎಂದು ಕೇಂದ್ರ ವಾರ್ತಾ ವಿನಿಮಯ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಮಾಧ್ಯಮ ನಿಷೇಧ ಕುರಿತು ತನಿಖೆ ನಡೆಸಿ ಕ್ರಮ ಜರಗಿಸಲಾಗುವುದು. ತಪ್ಪು ಸಂಭವಿಸಿದ್ದರೆ ತಿದ್ದುಪಡಿ ಮಾಡಲಾಗುವುದು. ಮಾಧ್ಯಮ ಸ್ವಾತಂತ್ರ್ಯ ಪ್ರಜಾಪ್ರಭುತ್ವಕ್ಕೆ ಅನಿವಾರ್ಯವೆಂದು ಸಚಿವರು ಹೇಳಿದರು.
ದಿಲ್ಲಿಯ ಕೋಮು ಗಲಭೆಯನ್ನು ಪಕ್ಷಪಾತದಿಂದ ವರದಿ ಮಾಡಲಾಗಿದೆ ಎಂದು ಆರೋಪಿಸಿ ಮೀಡಿಯ ವನ್, ಏಷ್ಯನೆಟ್ ನ್ಯೂಸ್ ಚ್ಯಾನೆಲ್ ಪ್ರಸಾರಕ್ಕೆ 48 ಗಂಟೆಗಳ ನಿಷೇಧವನ್ನು ಕೇಂದ್ರ ವಾರ್ತಾ ಪ್ರಸಾರ ಸಚಿವಾಲಯ ಹೇರಿತ್ತು. ಆದರೆ, ಪ್ರತಿಭಟನೆ ಬಲವಾಗುವುದರೊಂದಿಗೆ ಚ್ಯಾನೆಲ್ಗಳ ನಿಷೇಧ ತೆರವುಗೊಳಿಸಲಾಗಿತ್ತು.












