ಮೆಲನಿಯ ಟ್ರಂಪ್ ದಿಲ್ಲಿಯ ಹ್ಯಾಪಿನಸ್ ಕ್ಲಾಸ್‍ ಗೆ ಭೇಟಿ; ವಿಧಾನಸಭಾ ಚುನಾವಣೆಯ ವೇಳೆ ವ್ಯಾಪಕ ಟೀಕೆ ಮಾಡಿದ್ದ ಬಿಜೆಪಿ

0
492

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 22: ಅಮೆರಿಕದ ಪ್ರಥಮ ಮಹಿಳೆ ಮೆಲನಿಯ ಟ್ರಂಪ್ ದಿಲ್ಲಿ ಶಾಲೆಗಳಿಗೆ ಭೇಟಿ ನೀಡುವ ವೇಳೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಆಹ್ವಾನ ನೀಡಲಾಗಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ. ದಿಲ್ಲಿ ಶಾಲೆಗಳ ಹ್ಯಾಪಿನಸ್ ಕ್ಲಾಸ್‍ಗಳಲ್ಲಿ ಮೆಲನಿಯ ಭೇಟಿ ನೀಡುವರು ಎಂದು ತಿಳಿಸಲಾಗಿದೆ. ಆದರೆ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ , ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯರಿಗೆ ಆಹ್ವಾನ ನೀಡಲಾಗಿಲ್ಲ ಎಂದು ಆಮ್ ಆದ್ಮಿಪಾರ್ಟಿ ಮೂಲಗಳು ತಿಳಿಸಿವೆ. ದಕ್ಷಿಣ ದಿಲ್ಲಿಯ ಶಾಲೆಗೆ ವಿಶೇಷಾತಿಥಿಯಾಗಿ ಮೆಲನಿಯ ಬರಲಿದ್ದು ಒಂದು ಗಂಟೆಯ ಶಾಲಾ ಸಂದರ್ಶನ ಕಾರ್ಯಕ್ರಮ ಇದೆ. ಅವರು ವಿದ್ಯಾರ್ಥಿಗಳೊಂದಿಗೆ ಇಷ್ಟು ಸಮಯ ವ್ಯಯಿಸಲಿದ್ದಾರೆ. ಮನೀಷ್ ಸಿಸೊಡಿಯ ದಿಲ್ಲಿಯ ವಿದ್ಯಾರ್ಥಿಗಳಿಗೆ ಹ್ಯಾಪಿನೆಸ್ ಪಠ್ಯಪದ್ಧತಿಯನ್ನು ಎರಡು ವರ್ಷಗಳ ಹಿಂದೆ ಜಾರಿಗೆ ತಂದಿದ್ದರು.

ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು. 40 ನಿಮಿಷದ ಮೆಡಿಟೇಶನ್, ರಿಲಾಕ್ಸಿಂಗ್, ಔಟ್‍ಡೋರ್ ಆಕ್ಟಿವಿಟಿ ಪಠ್ಯಪದ್ಧತಿಯಲ್ಲದೆ. ದಿಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ಕಾಲದಲ್ಲಿ ಶಾಲೆಗಳ ಕುರಿತು ಬಿಜೆಪಿ ವ್ಯಾಪಕ ಅಪಪ್ರಚಾರ ನಡೆಸಿತ್ತು.