ಸೂಕ್ಷ್ಮ ವಿಷಯಗಳಲ್ಲಿ ನೇರ ಪ್ರಸಾರ ಬೇಡ: ಮಾಧ್ಯಮಗಳಿಗೆ ಸಚಿವಾಲಯ ಸೂಚನೆ

0
467

ಸನ್ಮಾರ್ಗ ವಾರ್ತೆ

ಸೇನಾ ನಿಯೋಜನೆ, ಪ್ರತಿರೋಧ ಚಟುವಟಿಕೆಗಳ ಬಗ್ಗೆ ನೇರ ಪ್ರಸಾರ ಮಾಡಬಾರದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವಾಲಯ ಮಾಧ್ಯಮಗಳಿಗೆ ಸೂಚನೆ ನೀಡಿದೆ. ಕಂದಹಾರ ವಿಮಾನ ಅಪಹರಣ, ಕಾರ್ಗಿಲ್ ಯುದ್ಧ, ಮುಂಬೈ ಭಯೋತ್ಪಾದನಾ ದಾಳಿ ಇತ್ಯಾದಿಗಳ ಬಗ್ಗೆ ಯಾವುದೇ ನಿಯಂತ್ರಣ ಇಲ್ಲದ ವರದಿಗಾರಿಕೆಯು ಭಾರೀ ಸಮಸ್ಯೆಯನ್ನು ಸೃಷ್ಟಿಸಿತ್ತು ಎಂದು ಕೂಡ ಸಚಿವಾಲಯ ತಿಳಿಸಿದೆ

ದೇಶದ ಸುರಕ್ಷಿತತೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಹಿಂದಿನ ಬೆಳವಣಿಗೆಯಿಂದ ಪಾಠ ಕಲಿಯಬೇಕಿದೆ. ಕಂದಹಾರ ವಿಮಾನ ಅಪಹರಣ, ಕಾರ್ಗಿಲ್ ಯುದ್ಧ, ಮುಂಬೈ ಭಯೋತ್ಪಾದನಾ ಕೃತ್ಯದ ಸಂದರ್ಭಗಳಲ್ಲಿ ಇಂತಹ ನೇರ ಪ್ರಸಾರಗಳಿಂದ ದೇಶದ ಭದ್ರತೆ ಮತ್ತು ಸುರಕ್ಷಿತತೆಗೆ ತೊಂದರೆ ಉಂಟಾಗಿದೆ ಎಂದು ಸಚಿವಾಲಯ ತಿಳಿಸಿದೆ.