ಸನ್ಮಾರ್ಗ ವಾರ್ತೆ
ಬಿಜೆಪಿಯವರು ಏನೇ ನಡೆದರೂ ಹಿಂದೂ ಮುಸ್ಲಿಂ ಅಂತ ಹೇಳ್ತಾರೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಸ್ಲಿಮರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಇಂತಹ ಸಂದರ್ಭದಲ್ಲೂ ಕೇಂದ್ರದ ಸರಕಾರದ ಯಾವೊಬ್ಬ ಸಚಿವರೂ ಮಾತಾಡ್ತಾ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಯಾವೊಬ್ಬ ಸಚಿವರೂ ಮಾತಾಡಿರುವ ಉದಾಹರಣೆ ಇಲ್ಲ.
ಶ್ರೀನಗರದ ಹೆಜ್ಜೆ ಹೆಜ್ಜೆಗೂ ಚೆಕ್ ಪೋಸ್ಟ್ ಗಳಿವೆ, ಮೊದಲಿನಿಂದಲೂ ಹೈ ಅಲರ್ಟ್ ನಲ್ಲಿರುವ ಸ್ಥಳ ಅದಾಗಿದೆ. ಆದರೆ ಘಟನೆ ನಡೆದ ಸ್ಥಳದಲ್ಲಿ ಒಬ್ಬ ವಾಚ್ಮನ್ ಕೂಡ ಇರಲಿಲ್ಲ ಎಂದವರು ಆರೋಪಿಸಿದ್ದಾರೆ.
ಕಾಶ್ಮೀರದಲ್ಲಿ ಭದ್ರತಾ ವೈಫಲ್ಯ ಆಗಿರುವುದು ನಿಜ. ಅದರ ಬಗ್ಗೆ ಕೇಂದ್ರ ಸರಕಾರ ಮಾತಾಡುತ್ತಿಲ್ಲ. ಅಲ್ಲಿ ಇದ್ದ ಮಕ್ಕಳ ಕಣ್ಣಲ್ಲಿ ನೀರಿಗಿಂತ ಹೆಚ್ಚು ಸಿಟ್ಟು ಕಾಣಿಸುತ್ತಿತ್ತು. ನಾನು ಘಟನಾಸ್ಥಳಕ್ಕೆ ಹೋದಾಗ ನಿಜಕ್ಕೂ ಬೇಸರ ತಂದಿತು. ಅಲ್ಲಿ ಜನ ನಿಜಕ್ಕೂ ರಕ್ತ ಕಣ್ಣೀರು ಹಾಕ್ತಾ ಇದ್ದಾರೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಆದರೆ ಇಷ್ಟೆಲ್ಲ ಆದರೂ ಮೋದಿ ಬಿಹಾರ ಚುನಾವಣಾ ಪ್ರಚಾರಕ್ಕೆ ಹೋದರು. ಘಟನೆ ನಡೆದ ಸ್ಥಳಕ್ಕೆ ಹೋಗಲಿಲ್ಲ. ಪ್ರಶ್ನಿಸಿದರೆ ಹಾರಿಕೆಯ ಉತ್ತರ ಕೊಡುತ್ತಾರೆ. ಇವರು ಈವರೆಗೆ ಮಣಿಪುರಕ್ಕೆ ಹೋಗಿಲ್ಲ ದೇಶದ ವಿಚಾರ ಬಂದಾಗ ಪಕ್ಷ ಮೀರಿ ಹೋಗಬೇಕಾಗುತ್ತದೆ. ನಾವು ಮೃತಪಟ್ಟವರಿಗೆ 10 ಲಕ್ಷ ಕೊಟ್ಟಿದ್ದೇವೆ ಇವರು ಏನು ಕೊಟ್ಟಿದ್ದಾರೆ ಎಂದು ಲಾಡ್ ಪ್ರಶ್ನಿಸಿದ್ದಾರೆ.












