“ಉಸಿರಾಡಲು ಆಗುತ್ತಿಲ್ಲ…ನನ್ನನ್ನು ಕೊಲ್ಲಬೇಡಿ”- ಕುತ್ತಿಗೆಯ ಮೇಲೆ ಪೋಲಿಸ್ ಮೊಣಕಾಲೂರಿದ ವಿಡಿಯೋ ವೈರಲ್; ವ್ಯಾಪಕಗೊಂಡ ಪ್ರತಿಭಟನೆ

0
2740

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಮೇ.27: ಅಮೆರಿಕದ ಮಿನ್ನೆಯಪೊಲಿಸ್‌ನಲ್ಲಿ ಪೊಲೀಸರ ಕಸ್ಟಡಿಯಲ್ಲಿದ್ದ ಆಫ್ರಿಕನ್ ವ್ಯಕ್ತಿಯೊಬ್ಬ ಕೊಲ್ಲಲ್ಪಟ್ಟಿದ್ದಾನೆ. ಜಾರ್ಜ್ ಪ್ಲಾಯಿಡ್ ಎಂಬ ಆಫ್ರಿಕಾ ಮೂಲದ ವ್ಯಕ್ತಿ ನಕಲಿ ದಾಖಲೆ ಉಪಯೋಗಿಸಿ ಅಮೆರಿಕ ಬಂದಿದ್ದಾನೆಂದು ಆರೋಪಿಸಿ ಅವನ್ನು ಬಂಧಿಸಲಾಗಿತ್ತು.ಆದರೆ
ಕಸ್ಟಡಿಗೆ ಪಡೆಯುವ ವೇಳೆಯೇ ದಾರುಣವಾಗಿ ಕೊಲೆಯಾಗಿದ್ದಾನೆ. ಪೊಲೀಸ್ ಅಧಿಕಾರಿಗಳು ನಗರ ಮಧ್ಯೆ ಆತನ ಕೊರಳನ್ನು ತಮ್ಮ ಮೊಣಕಾಲಿನಿಂದ ಅದುಮಿದ್ದರಿಂದ ಸಾವು ಸಂಭವಿಸಿದೆ.

ನನಗೆ ಉಸಿರಾಡಲು ಆಗುತ್ತಿಲ್ಲ… ನನ್ನನ್ನು ಕೊಲ್ಲಬೇಡಿರಿ ಎಂದು ಆತ ಅಂಗಲಾಚುತ್ತಿದ್ದಾನೆ. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳದ ಪೊಲೀಸರು ಮೊಣಕಾಲಿನಿಂದ ಕತ್ತನ್ನು ಅದುಮಿದ್ದು ಐದೇ ನಿಮಿಷದಲ್ಲಿ ಜಾರ್ಜ್ ನಿಶ್ಚಲನಗಿದ್ದಾನೆ. ಆಸ್ಪತ್ರೆಗೆ ಕರೆದೊಯ್ದರು ಅವನನ್ನು ಬದುಕಿಸಲಾಗಲಿಲ್ಲ.  ಮಿನ್ನೆಯಪೊಲಿಸ್‌ ನಗರದ ನಡುವೆ ಈ ಘಟನೆ ನಡೆದಿತ್ತು.

ಜೊತೆಗೆ ಇದ್ದಾತ ಮೊಬೈಲ್ ಫೋನ್‍ನಲ್ಲಿ ಸೆರೆಹಿಡಿದ ಕ್ರೂರ ಕೊಲೆಯ ದೃಶ್ಯ ವೈರಲ್ ಆಗಿದೆ. ಇದರೊಂದಿಗೆ ಅಮೆರಿಕದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ತೀವ್ರವಾಗಿದೆ. ಘಟನೆಯಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ವಜಾಮಾಡಲಾಗಿದೆ ಎಂದು ಮೇಯರ್ ಜೇಕ್ ಫ್ರೇ ತಿಳಿಸಿದರು.