ವೆಲ್ಲಿಂಗ್ಟನ್, ಜು. 15: ಕ್ರೈಸ್ಟ್ ಚರ್ಚ್ ಭಯೋತ್ಪಾದನಾ ದಾಳಿ ನಂತರ ನ್ಯೂಝಿಲೆಂಡಿನ ಸರಕಾರ ಆಯುಧ ವಶದಲ್ಲಿರಿಸಿಕೊಳ್ಳುವುದನ್ನು ನಿಷೇಧಿಸಿದ್ದು ಜನರು ಸೆಮಿ ಅಟೊಮ್ಯಾಟಿಕ್ ಪಿಸ್ತೂಲ್ ಸಹಿತ ತಮ್ಮಲ್ಲಿರುವ ಆಯುಧಗಳನ್ನು ಸರಕಾರದ ಆದೇಶದಂತೆ ಒಪ್ಪಿಸುತ್ತಿದ್ದಾರೆ. ಇಂತಹ ಫಿಸ್ತೂಲುಗಳು ಹೊಂದಿರುವವರು ಅದನ್ನು ಬದಲಾಯಿಸುವುದಕ್ಕೂ ಅವಕಾಶ ನೀಡಲಾಗಿತ್ತು. ಶನಿವಾರ ಕ್ರೈಸ್ಟ್ ಚಚ್ ನಗರದಲ್ಲಿ ಸೆಮಿ ಅಟ್ಯಾಮೆಟಿಕ್ ಬಂದೂಕು ಸಂಗ್ರಹಿಸುವ ಕಾರ್ಯ ನಡೆದಿದ್ದು 250ಕ್ಕೂ ಹೆಚ್ಚು ಬಂದೂಕುಗಳು ಸಂಗ್ರಹವಾಗಿದೆ.
ಈ ಕ್ರಮಕ್ಕೆ ಸರಕಾರಕ್ಕೆ ಪ್ರತಿಪಕ್ಷ ಬೆಂಬಲ ಸೂಚಿಸಿದೆ. ದೇಶದ ಬಂದೂಕು ಕಾನೂನು ಬಲಪಡಿಸಲು ಕಾನೂನು ತರಲು ನ್ಯೂಝಿಲೆಂಡ್ ನಿರ್ಧರಿಸಿದೆ. ಕೋವಿಯನ್ನು ಒಪ್ಪಿಸಲು ಡಿಸೆಂಬರ್ 20ರವರೆಗೆ ಅವಕಾಶ ನೀಡಲಾಗಿದೆ. ಅದರೆ ದೇಶದಲ್ಲಿ ಸೆಮಿ ಅಟ್ಯಾಮೆಟಿಕ್ ಬಂದೂಕು, ಸಣ್ಣ ಬಂದೂಕು, ಇತರ ಆಯುಧಗಳನ್ನು ನಿಷೇಧಿಸಲಾಗಿದೆ.












