ತಮಿಳ್ನಾಡು ಜಾತ್ಯತೀತವಾಗಿಯೇ ಇರುತ್ತದೆ; ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ಸ್ಟಾಲಿನ್

0
459

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳುನಾಡು ಯಾವಾಗಲೂ ಜಾತ್ಯಾತೀತವಾಗಿಯೇ ಮುಂದುವರಿಯಲಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.‌ ಸ್ಟಾಲಿನ್ ಹೇಳಿದ್ದಾರೆ.

ಬಿಜೆಪಿಯನ್ನು ತಮಿಳರು ಒಪ್ಪುವುದಿಲ್ಲ. ತಮಿಳನ್ನು ಇಲ್ಲದಾಗಿಸುವ ಬದಲು ಹಿಂದಿ, ಸಂಸ್ಕೃತ ತರಲು ಬಿಜೆಪಿ ಶ್ರಮಿಸುತ್ತಿದೆ ಎಂದು ನ್ಯೂಸ್ 18 ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಸ್ಟಾಲಿನ್ ಹೇಳಿದ್ದಾರೆ.

ತಮಿಳ್ ಕವಿ ತಿರುವಳ್ಳುವರ್ ಗೆ ಕೇಸರಿ ಬಣ್ಣ ತೊಡಿಸಲು ಬಿಜೆಪಿ ಮತ್ತು ಆರೆಸ್ಸೆಸ್ ಶ್ರಮಿಸುತ್ತಿದೆ. ಇದು ಒಪ್ಪಲಾಗದು. ರೈತರು ಅನುಭವಿಸುತ್ತಿರುವ ಕಷ್ಟಗಳು ಮುಂದಿನ ಚುನಾವಣೆಯ ಮುಖ್ಯ ವಿಷಯವೆಂದು ಸ್ಟಾಲಿನ್ ಹೇಳಿದರು.

ಕಾಂಗ್ರೆಸ್-ಡಿಎಂಕೆ ಸಖ್ಯದ ಕುರಿತು ಸಂದೇಹವಿಲ್ಲ. ಪಾರ್ಲಿಮೆಂಟ್ ಚುನಾವಣೆ ಒಟ್ಟಿಗೆ ಎದುರಿಸಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಇದೇ ಆಗುತ್ತದೆ. ವಿ.ಕೆ. ಶಶಿಕಲಾರು ಮರಳಿ ಬರುವುದರ ಕುರಿತ ಪ್ರಶ್ನೆಗೆ ಇನ್ನೊಂದು ಪಕ್ಷದ ಆಂತರಿಕ ವಿಷಯದಲ್ಲಿ ಅಭಿಪ್ರಾಯ ಹೇಳುವುದಿಲ್ಲ ಎಂದು ಸ್ಟಾಲಿನ್ ಹೇಳಿದರು.