ಪಾಟ್ನ, ಮೇ 28: ಬಿಹಾರದ ಬೇಗುಸರಾಯ್ಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ರಾಜೀವ್ ಯಾದವ್ ಎಂಬಾತ ಗುಂಡು ಹಾರಿಸಿದ್ದಾನೆ. ಮೊದಲು ಹೆಸರು ಕೇಳಿದ ಯಾದವ್ ಮುಹಮ್ಮದ್ ಖಾಸಿಂ ಎಂದು ತಿಳಿದುಕೊಂಡಂತೆ ನೀನು ಪಾಕಿಸ್ತಾನಕ್ಕೆ ಹೋಗು ಎಂದು ಬಂದೂಕಿನಿಂದ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ. ನಂತರ ಪೊಲೀಸರು ಗುಂಡೇಟಿಗೀಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಮುಹಮ್ಮದ್ ಖಾಸಿಂನನ್ನು ಆಸ್ಪತ್ರೆಗೆ ಸೇರಿಸಿದರು. ಮುಹಮ್ಮದ್ ಖಾಸಿಂ ಮುಸ್ಲಿಂ ಆಗಿದ್ದು ಯಾದವ್ನ ದ್ವೇಷಕ್ಕೆ ಕಾರಣವಾಗಿತ್ತು ಎಂದು ವರದಿ ತಿಳಿಸಿದೆ.
ಮುಹಮ್ಮದ್ ಖಾಸಿಂ ಸೇಲ್ಸ್ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಖಾಸಿಂರನ್ನು ತಡೆದು ನಿಲ್ಲಿಸಿದ ರಾಜೀವ್ ಯಾದವ್ ಹೆಸರು ಕೇಳಿ ಇಂತಹ ಧೂರ್ತ ಕೃತ್ಯವೆಸಗಿದ್ದಾನೆಂದು ಖಾಸಿಂ ತಿಳಿಸಿದರು. ಖಾಸಿಂ ವಿವರಣೆ ನೀಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ರಾಜೀವ್ ಮದ್ಯ ಕುಡಿದಿದ್ದ ಎಂದು ಖಾಸಿಂ ಹೇಳಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












