ಸನ್ಮಾರ್ಗ ವಾರ್ತೆ
ಲಕ್ನೊ: ಉತ್ತರಪ್ರದೇಶದ ಬಾಗ್‍ಪತ್‍ನಲ್ಲಿ ಆರು ವರ್ಷದ ಬಾಲಕಿಯನ್ನು ಅತ್ಯಾಚಾರದಿಂದ ಕೆಲವು ಕೋತಿಗಳು ರಕ್ಷಿಸಿದ ಅಪೂರ್ವ ಘಟನೆ ಶನಿವಾರ ನಡೆದಿದೆ.
ನಿರ್ಜನ ಮನೆಗೆ ವ್ಯಕ್ತಿಯೊಬ್ಬ ಕರೆಂದು ಅತ್ಯಾಚಾರಕ್ಕೆ ಪ್ರಯತ್ನಿಸುತ್ತಿದ್ದ ಸಮಯದಲ್ಲಿ ಅಲ್ಲಿಗೆ ಬಂದ ಕೋತಿಗಳು ಆತನ ಮೇಲೆ ದಾಳಿ ಮಾಡಿದವು. ಹೆದರಿ ಆತ ಮಗುವನ್ನು ಬಿಟ್ಟು ಓಡಿ ಹೋದ. ಮನೆಗೆ ಮರಳಿ ಬಂದ ಮಗು ತಂದೆ ತಾಯಿಗೆ ವಿಷಯ ತಿಳಿಸಿದಳೆಂದು ವರದಿಯಾಗಿದೆ.
ಬಾಲಕಿ ಮನೆಯ ಹೊರಗೆ ಆಡುತ್ತಿದ್ದ ವೇಳೆ ಆಕೆಯನ್ನು ಜನರಿಲ್ಲದ ಮನೆಗೆ ಕರೆದು ಕೊಂಡು ಹೋಗಿದ್ದ. ಆದರೆ ಅದೇ ಸಮಯದಲ್ಲಿ ಅಲ್ಲಿ ಮಂಗಗಳು ಪ್ರತ್ಯಕ್ಷವಾದವು ಮತ್ತು ಆತನ ಮೇಲೆ ದಾಳಿ ಮಾಡಿ ಓಡಿಸಿತು ಎಂದು ಟೈಮ್ಸ್ ಆಫ್ ಇಂಡಿಯಾಕ್ಕೆ ಬಾಲಕಿಯ ತಂದೆ ತಿಳಿಸಿದರು. ಘಟನೆಯಲ್ಲಿ ಬಾಲಕಿಯ ತಂದೆ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ವ್ಯಕ್ತಿಯು ಬಾಲಕಿಯನ್ನು ಕರೆದು ಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಇದೇ ವೇಳೆ ಆರೋಪಿಯನ್ನು ಪೊಲೀಸರು ಕಂಡು ಹಿಡಿಯಲು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಬಿಎನ್‍ಎಸ್ ಸೆಕ್ಷನ್ 74,76, ಪೊಕ್ಸೊ ಪ್ರಕರಣಗಳನ್ನು ದಾಖಲಿಸಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.












