ಪೇಜರ್ ಸ್ಫೋಟ ಭಯೋತ್ಪಾದನೆಯಾಗಿದೆ- ಮಾಜಿ ಸಿಐಎ ನಿರ್ದೇಶಕ

0
5021

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಲೆಬನಾನಿನ ಪೇಜರ್ ಸ್ಫೋಟ ಭಯೋತ್ಪಾದನೆಯಾಗಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಮಾಜಿ ನಿರ್ದೇಶಕ ಲಿಯೊನ್ ಪ್ಯಾನೆಟ್ ಹೇಳಿದ್ದಾರೆ.

ಪೇಜರ್, ವಾಕಿ ಟಾಕಿ ದಾಳಿ ದೊಡ್ಡ ಆಘಾತ ಸೃಷ್ಟಿಸಲಿದೆ ಎಂದು ಲಿಯೋನ್ ಚ್ಯಾನೆಲ್‍ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಿತ್ಯ ಬಳಕೆಯ ವಸ್ತುಗಳನ್ನು ಭಯೋತ್ಪಾದನಾ ದಾಳಿಗೆ ಬಳಸಿದರೆ ಜನರ ನಡುವೆ ಭಯ ಹರಡುತ್ತದೆ. ನಂತರ ಇಂತಹ ವಸ್ತುಗಳು ಸ್ಫೋಟಗೊಳ್ಳುವುದೇ ಎಂದು ಜನರು ಸಂದೇಹಿಸುತ್ತಾರೆ ಎಂದು ಅವರು ಹೇಳಿದರು.

ಪೇಜರ್ ದಾಳಿ ಭಯೋತ್ಪಾದನೆಯಾಗಿದೆ ಎಂಬ ವಿಷಯದಲ್ಲಿ ಸಂದೇಹವಿಲ್ಲ. ಸರಕಾರಿ ವ್ಯವಸ್ಥೆಗಳು ಈ ದಾಳಿಯನ್ನು ಕೂಡಲೇ ಗಂಭೀರವಾಗಿ ಪರಿಗಣಿಸಿ ಕ್ರಮ ಜರಗಿಸದಿದ್ದರೆ ನನ್ನ ಮಾತು ಬರೆದಿಡಿ ಭವಿಷ್ಯದಲ್ಲಿ ಇದುವೇ ಯುದ್ಧ ಆಗಬಹುದು ಎಂದು ಅವರು ಹೇಳಿದರು.

ಲೆಬನಾನಿನಲ್ಲಿ ಪೇಜರ್, ವಾಕಿಟಾಕಿ ದಾಳಿಯಲ್ಲಿ 37 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಮೊಬೈಲ್ ಫೋನ್ ಬದಲಾಗಿ ಹಿಝ್ಬುಲ್ಲ ಪೇಜರ್ ಬಳಸುತ್ತಿತ್ತು. ವಾಕಿಟಾಕಿಯನ್ನು ಇತ್ತೀಚೆಗೆ ಉಪಯೋಗಿಸ ತೊಡಗಿತ್ತು. ಇದು ಎಲ್ಲ ಒಟ್ಟಾಗಿ ಸ್ಫೋಟಗೊಂಡಿವೆ.