ಕೊರೋನ: ಮಗಳ ಬೆನ್ನಿಗೆ ತಾಯಿ ಸಾವು

0
290

ಸನ್ಮಾರ್ಗ ವಾರ್ತೆ

ಕೇರಳ: ಮಗಳು ಮೃತಪಟ್ಟ ಬೆನ್ನಿಗೆ ಕೊರೋನ ಪೀಡಿತರಾಗಿದ್ದ ತಾಯಿ ನಿಧನರಾದ ಘಟನೆ ಕೇರಳದ ಚಾವಕ್ಕಾಡ್ ಕಡಪ್ಪುರಂ ಎಂಬಲ್ಲಿ ನಡೆದಿದೆ.

ಕಳೆದ ಎರಡು ವಾರದ ಹಿಂದೆ ತೃಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ಶಾರದ(49) ಮೃತ ಪಟ್ಟ ಮಹಿಳೆಯಾಗಿದ್ದಾರೆ. ಇವರ ಪುತ್ರಿ ಸಿನಿ ತನ್ನ ನವಜಾತ ಶಿಶುವಿನೊಂದಿಗೆ ಸಾರ್ವಜನಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿನಿ ಕೂಡ ಕೊರೋನದಿಂದ ಬಳಲುತ್ತಿದ್ದರು.

ಪ್ರಸವ ಶುಶ್ರೂಷೆಗೆಂದು ಮಗಳ ಮನೆಯಲ್ಲಿ ಶಾರದ ಇದ್ದರು. ಶಾರದಾರಿಗೂ ಕೊರೋನ ದೃಢಪಟ್ಟಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಅವರ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿರುವ ಎಲ್ಲರಿಗೂ ಕೊರೋನ ದೃಢಪಟ್ಟಿದೆ.