ಇಸ್ರೇಲ್- ಹಮಾಸ್ ಕದನ ವಿರಾಮ ಒಪ್ಪಂದ

0
2171

ಸನ್ಮಾರ್ಗ ವಾರ್ತೆ

ಜೆರುಸಲೇಮ್: ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದೇವೆ ಎಂದು ಹಮಾಸ್ ಮತ್ತು ಇಸ್ರೇಲ್ ತಿಳಿಸಿವೆ. ಹನ್ನೊಂದು ದಿನಗಳ ಹೋರಾಟದ ನಂತರ ಈ ತೀರ್ಮಾನ. ಹೋರಾಟದಲ್ಲಿ ಗಾಝದ 232 ಫೆಲಸ್ತೀನಿಯರು ಹನ್ನೆರಡು ಇಸ್ರೇಲಿಯರು ಹತರಾಗಿದ್ದಾರೆ. ಈಜಿಪ್ಟಿನ ಮಧ್ಯಸ್ಥಿಕೆಯಲ್ಲಿ ಪರಸ್ಪರ ನಿಶರ್ತ ಗಾಝ ಒಪ್ಪಂದಕ್ಕೆ ಅನೂಕೂಲಕರವಾಗಿ ಒಮ್ಮತದಿಂದ ಮತದಾನ ನಡೆಯಿತೆಂದು ಇಸ್ರೇಲ್ ಸುರಕ್ಷಾ ಕ್ಯಾಬಿನೆಟ್ ಗುರುವಾರ ತಿಳಿಸಿದೆ.

ಪರಸ್ಪರ ನಿಶ್ಶರ್ತ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದೇವೆ ಎಂದು ಗಾಝದಲ್ಲಿ ಆಡಳಿತದಲ್ಲಿರುವ ಹಮಾಸ್, ಪಿಐಜೆ ಸಶಸ್ತ್ರ ವಿಭಾಗ ದೃಢೀಕರಿಸಿದೆ. ಶುಕ್ರವಾರ ಬೆಳಗ್ಗೆ ಎರಡು ಗಂಟೆಯೊಳಗೆ ಗುಂಡು ಹಾರಾಟ ನಿಲ್ಲಿಸುವುದು ಕಾರ್ಯರೂಪಕ್ಕೆ ಬಂದಿದೆ. ಕದನ ವಿರಾಮ ಜಾರಿಗೆ ಬಂತು. ಗಾಝದ ಮೇಲೆ ಇಸ್ರೇಲ್ ದಾಳಿಗಿಳಿದಿರುವುದನ್ನು ವಿರೋಧಿಸಿ ಜಗತ್ತಿನಾದ್ಯಂತ ಟೀಕೆ, ಪ್ರತಿಭಟನನೆ ವ್ಯಕ್ತವಾಗಿತ್ತು. ಅಮೆರಿಕ ಅಧ್ಯಕ್ಷ ಜೊ ಬೈಡನ್, ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹುರೊಂದಿಗೆ ಕದನ ವಿರಾಮಕ್ಕೆ ಆಗ್ರಹಿಸಿದರು. ಈಜಿಪ್ಟ್, ಕತರ್, ವಿಶ್ವಸಂಸ್ಥೆ ಮಧ್ಯಸ್ಥಿಕೆ ಯತ್ನದಲ್ಲಿ ಕದನ ವಿರಾಮ ಸಾಕ್ಷಾತ್ಕರಿಸಲ್ಪಟ್ಟಿತು.

ಇಸ್ರೇಲ್ ಮತ್ತು ಅತಿಕ್ರಮಿತ ಫೆಲಸ್ತೀನ್ ಭೂ ಭಾಗದಲ್ಲಿ ಕದನ ವಿರಾಮ ಜಾರಿಗೆ ತರುವುದಕ್ಕಾಗಿ ಈಜಿಪ್ಟ್ ಎರಡು ಸುರಕ್ಷಾ ಪ್ರತಿನಿಧಿಗಳನ್ನು ನಿಯೋಜಿಸಿದೆ. ಗಾಝದಲ್ಲಿ ವ್ಯಾಪಕ ನಾಶಕ್ಕೆ ಕಾರಣವಾದ ಯುದ್ಧದಲ್ಲಿ ಇಸ್ರೇಲಿನ ದೈನಂದಿನ ಜೀವನ ವಿಧಾನ ತಾರುಮಾರಾಗಿತ್ತು. 2014ರ ನಂತರ ನಡೆದ ಭೀಕರ ಯುದ್ಧ ಇದಾಗಿದ್ದು ಈ ಒಪ್ಪಂದಲ್ಲಿ ಕೊನೆಗೊಳ್ಳಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here