ಸಿಎಎಯ ಭಯದ ಭ್ರಮೆಯ ಭೂತ ವಿಫಲವಾಗಿದೆ: ಮುಕ್ತಾರ್ ಅಬ್ಬಾಸ್ ನಕ್ವಿ

0
1318

ಸನ್ಮಾರ್ಗ ವಾರ್ತೆ

ಲಕ್ನೊ, ಜ.11: ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಮುಕ್ತಾರ ಅಬ್ಬಾಸ್ ನಕ್ವಿ ಪೌರತ್ವ ತಿದ್ದುಪಡಿ ಕಾನೂನು ಕುರಿತ ಹಾರರ್ ಹಂಗಾಮ, ಹವಾ-ಹವಾಯಿ ನಡೆಯುತ್ತಿದೆ. ಮತ್ತು ಜನರ ನಡುವೆ ಕೆಲವು ರಾಜಕೀಯ ಪಾರ್ಟಿಗಳು ಸೃಷ್ಟಿಸಿದ ಭಯದ ಭ್ರಮೆಯ ಭೂತ ವಿಫಲವಾಗಿದೆ ಎಂದು ಹೇಳಿದರು.

ಸಿಎಎಯಲ್ಲಿ ಬಿಜೆಪಿ ದೇಶವ್ಯಾಪಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶುಕ್ರವಾರ ಲಕ್ನೊದ ಬಿಜೆಪಿ ಕಚೇರಿಯಲ್ಲಿ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಕಾಂಗ್ರೆಸ್ ಮತ್ತು ಅದರ ಸಂಗಡಿಗರು ವದಂತಿಗಳನ್ನು ಹರಡಿ ಶಾಂತಿಯನ್ನು ಕದಡುವ ಸಂಚು ರೂಪಿಸಿದ್ದಾರೆ. ಸಮಾಜದ ಏಕತೆ-ಸೌಹಾರ್ದ ಕೆಡಿಸುವ ಯತ್ನ ನಡೆಯುತ್ತಿದೆ. ರಾಜಕೀಯ ಪ್ರೇರಿತ ಪ್ರತಿಭಟನೆಗಳ ಮೂಲಕ ಸೌಹಾರ್ದಕ್ಕೆ ಹಾನಿ ಮಾಡಲಾಗಿದೆ ಎಂದು ನಕ್ವಿ ಹೇಳಿದರು.

ಕಾಂಗ್ರೆಸ್ ಮತ್ತು ಅದರ ಸಂಗಡಿಗರ ಸುಳ್ಳಿನಿಂದ ಜನರನ್ನು ಪ್ರಚೋದಿಸಲಾಗುತ್ತಿದೆ. ಪೌರತ್ವ ಕಾನೂನು ಕೇಂದ್ರಬಿಂದು ಮಾಡಿ ಹಾರರ್ ಹಂಗಾಮ ನಡೆಯುತ್ತಿದೆ. ಪೌರತ್ವ ಕಾನೂನು ಪೌರತ್ವ ನೀಡುವುದಕ್ಕಿರುವುದಾಗಿದೆ. ಪೌರತ್ವ ಕಿತ್ತುಕೊಳ್ಳುವುದಕ್ಕೆ ಇರುವುದಲ್ಲ. ಪ್ರಧಾನಿ ಮತ್ತು ಗೃಹ ಸಚಿವರು ದೇಶದ ಎಲ್ಲ ಸಾಮಾಜಿಕ, ಧಾರ್ಮಿಕ, ಸಂವಿಧಾನಿಕ ಹಕ್ಕುಗಳು ಸುರಕ್ಷಿತವಾಗಿರಲಿದೆ ಎಂದು ಭರವಸೆ ನೀಡಿದ್ದಾರೆ. ಭಾರತೀಯರ ಪೌರತ್ವ ಹಕ್ಕಿಗೆ ಯಾವುದೇ ಅಪಾಯ ಇಲ್ಲ, ಮತ್ತು ಆಗುವುದೂ ಇಲ್ಲ. ಭಾರತ ಮುಸ್ಲಿಮರಿಗೆ ಹೆಚ್ಚು ಸುರಕ್ಷಿತ ಸ್ಥಳವಾಗಿದೆ ಎಂದೂ ನಕ್ವಿ ಹೇಳಿದರು.