ಸನ್ಮಾರ್ಗ ವಾರ್ತೆ
ಢಾಕ, ಜ.11: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪುನಃ ಬಾಂಗ್ಲಾದೇಶದಿಂದ ಪ್ರತಿಭಟನೆ ವ್ಯಕ್ತವಾಗಿದೆ. ಬಾಂಗ್ಲಾದೇಶದ ವಿದೇಶ ಸಹ ಸಚಿವ ಶಹ್ರಿಯಾರ್ ಆಲಂ ಭಾರತ ಸಂದರ್ಶನವನ್ನು ರದ್ದುಪಡಿಸಿದರು. ದಿಲ್ಲಿಯ ವಿದೇಶ ಸಚಿವಾಲಯ ಸಂಘಟಿಸುವ ವಾರ್ಷಿಕ ಸಮ್ಮೇಳನದಲ್ಲಿ ಅವರು ಭಾಗವಹಿಸಬೇಕಿತ್ತು.
30 ದಿವಸದ ಒಳಗೆ ನಾಲ್ಕನೆ ಸಲ ಬಾಂಗ್ಲಾದೇಶದ ಸಚಿವರು ಭಾರತ ಭೇಟಿಯನ್ನು ರದ್ದುಪಡಿಸುತ್ತಿದ್ದಾರೆ. ಬಾಂಗ್ಲಾದೇಶದ ಅಲ್ಪಸಂಖ್ಯಾತರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ಭಾರತದ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೆರೆದೇಶ ಬಾಂಗ್ಲಾದೇಶದ ಕೋಪಕ್ಕೆ ತುತ್ತಾಗಿದೆ.
ಬಾಂಗ್ಲಾದೇಶ ವಿದೇಶ ಸಚಿವ ಡಾ. ಎಕೆ ಅಬ್ದುಲ್ ಮೊಮನ್, ಗೃಹ ಸಚಿವ ಅಸದುಝ್ಝಮಾನ್ ಖಾನ್ ಈ ಹಿಂದೆ ಭಾರತ ಭೇಟಿಯನ್ನು ರದ್ದುಪಡಿಸಿದ್ದರು. ಅಮಿತ್ ಶಾರ ಹೇಳಿಕೆಯ ವಿರುದ್ಧ ಅಬ್ದುಲ್ ಮೊಮನ್ ಕಟುವಾಗಿ ಪ್ರತಿಕ್ರಿಯಿಸಿದ್ದರು.












