ಸನ್ಮಾರ್ಗ ವಾರ್ತೆ
ಕುದ್ರೋಳಿ: ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿಯಿಂದ ಸ್ವಾತಂತ್ರ್ಯೋತ್ಸವದ 75ನೇ ಅಮ್ರತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಸೋಮವಾರ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶಂಶುದ್ದೀನ್ HBT ಧ್ವಜಾರೋಹಣ ನೆರವೇರಿಸಿದರು. ನಂತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ ಅಬೂಬಕ್ಕರ್ರವರು ಶುಭ ಹಾರೈಸಿದರು.
ಫಾತಿಮಾ ಇಸ್ಲಾಮಿಕ್ ಸೆಂಟರ್ ಕುದ್ರೋಳಿಯಲ್ಲಿ SSLCಯ ಎಂಟು ವಿಧ್ಯಾರ್ಥಿಗಳನ್ನು ಹಾಗು ದ್ವಿತೀಯ ಪಿಯುಸಿಯ ಐದು ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಫೀಕ್ ಮಾಸ್ಟರ್ ರವರು ವಿಧ್ಯಾರ್ಥಿಗಳಿಗೆ ಹಾಗು ಹೆತ್ತವರಿಗೆ ಉಪದೇಶ ಮಾಡಿದರು. ಬಂದರ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್. ರಾಘವೇಂದ್ರ ಬೈಂದೂರು ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಗಣೇಶ್ ಫ್ರೆಂಡ್ ಸರ್ಕಲ್ ಇದರ ಮಾಜೀ ಅದ್ಯಕ್ಷರಾದ ನಾರಾಯಣ ಕರ್ಕೇರ, ಮುಹೀದ್ದೀನ್ ಮಸೀದಿಯ ಅದ್ಯಕ್ಷರಾದ ಅಝೀಝ ಪಿ ಪಿ, ಮುಸ್ಲಿಂ ಐಕ್ಯತಾ ವೇದಿಕೆಯ ಅದ್ಯಕ್ಷರಾದ ಮುಹಮ್ಮದ್ ಯಾಸಿನ್ ಪ್ರಧಾನ ಕಾರ್ಯದರ್ಶಿ ಬಿ ಅಬೂಬಕ್ಕರ್, ಖಜಾಂಚಿ ಯವರಾದ ಮಕ್ಬುಲ್ ಅಹ್ಮದ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶಂಶುದ್ದೀನ್ HBT, ಜಾಮಿಯಾ ಮಸೀದಿಯ ಖತೀಬರಾದ ಝುಬೈರ್ ಮೌಲಾನಾ ಉಪಸ್ಥಿತರಿದ್ದರು. ಮುಹಮ್ಮದ್ ಹಾರಿಸ್ ರವರು ಕಾರ್ಯಕ್ರಮ ನಿರೂಪಿಸಿದರು. ವಹಾಬ್ ಕುದ್ರೋಳಿಯವರು ಧನ್ಯವಾದವಿತ್ತರು.












