ಸನ್ಮಾರ್ಗ ವಾರ್ತೆ
ತ್ರಿಶೂರ್: ಜ. 29- ಸಿಎಎ ವಿರೋಧಿ ಪ್ರತಿಭಟನೆಯ ಅಂಗವಾಗಿ ತ್ರಿಶೂರ್ ಪಟ್ಟಣದ ಜನಪ್ರಿಯ ಸ್ವರಾಜ್ ವೃತ್ತದಲ್ಲಿ ಸುಮಾರು ಒಂದು ಲಕ್ಷ ಜನರು ಒಟ್ಟುಗೂಡಿದ್ದರು. ಈ ಪ್ರತಿಭಟನೆಯನ್ನು ಮುಸ್ಲಿಮರೇ ಆಯೋಜಿಸಿದ್ದರು. ಅದೇ ಸಮಯದಲ್ಲಿ, ಆನೆಗಳು ಮತ್ತು ತಾಳವಾದ್ಯಗಳೊಂದಿಗೆ ಸ್ಥಳೀಯ ಭಕ್ತಪ್ರಿಯಂ ದೇವಾಲಯದ ಹಬ್ಬದ ಮೆರವಣಿಗೆ ಅದೇ ಪ್ರದೇಶದ ಮೂಲಕ ಹಾದು ಹೋಗಬೇಕಾಗಿತ್ತು. ಇದು ಪೊಲೀಸರನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿತು.
ಆದ್ದರಿಂದ ಉನ್ನತ ಪೊಲೀಸ್ ಅಧಿಕಾರಿಗಳು ಎರಡೂ ಕಡೆಯ ಸಂಘಟಕರೊಂದಿಗೆ ಮಾತನಾಡಿದರು. ಆಗ, ಸಿಎಎ ವಿರೋಧಿ ಪ್ರತಿಭಟನೆಯನ್ನು ಆಯೋಜಿಸಿರುವ ಮುಸ್ಲಿಂ ನಾಯಕರು ದೇವಾಲಯದ ಉತ್ಸವ ಮೆರವಣಿಗೆಯನ್ನು ಪ್ರತಿಭಟನಾ ವೃತ್ತದ ಮೂಲಕವೇ ಹಾದು ಹೋಗುವಂತೆ ಮಾಡಿ ಸಾಮರಸ್ಯ ಮೆರೆದರು.
ಮೆರವಣಿಗೆಯು ಯಾವುದೇ ಅಡೆತಡೆಗಳಿಲ್ಲದೆ ತ್ರಿಶೂರ್ ಪಟ್ಟಣದ ಮೂಲಕವೇ ಹಾದು ಹೋಯಿತಲ್ಲದೆ, ರಸ್ತೆಯ ಇಕ್ಕೆಲಗಳಲ್ಲಿ ಮುಸ್ಲಿಂ ಸ್ವಯಂ ಸೇವಕರು ಕೈ ಹಿಡಿದು ಜನರನ್ನು ನಿಯಂತ್ರಿಸಿದರು. ವಿಗ್ರಹವನ್ನು ಹೊತ್ತುಕೊಂಡು ಆನೆಯೊಂದಿಗೆ ತಾಳವಾದ್ಯದ ಮೂಲಕ ಮೆರವಣಿಗೆ ಸಾಗಿತು.
ಈ ವೀಡಿಯೊವನ್ನು ತ್ರಿಶೂರ್ ನಗರ ಪೊಲೀಸರ ಫೇಸ್ಬುಕ್ ಪುಟದಲ್ಲಿ ಮಲಯಾಳಂ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಅದರಲ್ಲಿ “ಮಾನವೀಯತೆಯು ಧರ್ಮಕ್ಕಿಂತ ದೊಡ್ಡದಾಗಿದೆ. ತ್ರಿಶೂರ್ ನಿವಾಸಿಗಳು ದೇಶಕ್ಕೆ ನೀಡುವ ಪಾಠ ಅದು. ತ್ರಿಶೂರ್ ಕೇರಳದ ಸಾಂಸ್ಕೃತಿಕ ರಾಜಧಾನಿಯಾಗಿದೆ ” ಎಂದು ಕೊಂಡಾಡಲಾಗಿದೆ.
#മതമല്ല വലുത്, മനുഷ്യനാണ്.വിവിധ മുസ്ലിം സംഘടനകളുടെ ആഭിമുഖ്യത്തിൽ തൃശൂരിൽ ഇന്നലെ (25.01.2020) നടന്ന ഭരണഘടനാ സംരക്ഷണവലയം എന്ന പ്രതിഷേധ പരിപാടി നിശ്ചയിച്ച സമയത്തു തന്നെയാണ് തൊട്ടടുത്ത ഭക്തപ്രിയം ക്ഷേത്രത്തിലെ ഉത്സവം കടന്നു പോകേണ്ടിയിരുന്നത്. ക്ഷേത്രം അധികൃതർ ഇക്കാര്യം പോലീസുദ്യോഗസ്ഥരും പ്രതിഷേധ സംഘടനാ നേതാക്കളുമായി സംസാരിച്ചപ്പോൾ, ക്ഷേത്ര ഉത്സവം തീരുമാനിച്ച സമയത്തു തന്നെ നടത്തുവാൻ എല്ലാ സഹകരണവും മുസ്ലിം സംഘടനാപ്രവര്ത്തകര് വാഗ്ദാനം ചെയ്യുകയും, പ്രതിഷേധത്തിനെത്തിയവർ തന്നെ ക്ഷേത്ര ഉത്സവത്തിന്റെ വളണ്ടിയർമാരായി രംഗത്തിറങ്ങുകയും ചെയ്തു.മതമല്ല; മനുഷ്യനാണ് വലുതെന്ന വലിയ പാഠമാണ് തൃശൂര് നിവാസികള് ഈ രാജ്യത്തിനു നല്കുന്നത്. തൃശൂര് തന്നെയാണിഷ്ടാ കേരളത്തിന്റെ സാംസ്കാരിക തലസ്ഥാനം…!!!!#Thrissur_City_Police.#Communal_Harmony.#Unity_in_Diversity.
Posted by Thrissur City Police on Saturday, January 25, 2020












