ಭಾರತದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತರು: ಶಾನವಾಝ್ ಹುಸೇನ್

0
613

ಹೊಸದಿಲ್ಲಿ, ಜು. 13: ಬಿಜೆಪಿ ರಾಷ್ಟ್ರೀಯ ವಕ್ತಾರ ಶಾಹನವಾಝ್ ಹುಸೇನ್ ಸಮಾಜವಾದಿ ಪಾರ್ಟಿ, ಬಿಎಸ್ಪಿ, ಕಾಂಗ್ರೆಸ್ ಮೂಲಕ ಸೃಷ್ಟಿಯಾದ ಪರಿಸ್ಥಿತಿಯಿಂದಾಗಿ ಸೋನಭದ್ರದಲ್ಲಿ ಇಂತಹ ಪರಿಸ್ಥಿತಿಯಾಗಿದೆ. ಯೋಗಿ ಸರಕಾರ ಆ ಘಟನೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಮುಖ್ಯಮಂತ್ರಿ ಸ್ವಯಂ ಸೊನ್‍ಭದ್ರದಲ್ಲಿ ಹತ್ಯೆಯಾದವರ ಕುಟುಂಬವನ್ನು ಸಂದರ್ಶಿಸಿದರು. ಜೊತೆಗೆ ಪರಿಹಾರದ ಮೊತ್ತವನ್ನು ಕೂಡ ಹೆಚ್ಚಿಸಿದರು. ವಸತಿ, ಪೆನ್ಶನ್ ಇತ್ಯಾದಿ ಸವಲತ್ತುಗಳನ್ನು ಕೊಟ್ಟಿದ್ದಾರೆ. ಆದ್ದರಿಂದ ಈ ಘಟನೆಯಲ್ಲಿ ರಾಜಕೀಯ ಮಾಡದಿದ್ದರೆ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಭಾಸ್ಕರ್ ಡಾಟ್ ಕಾಮ್‍ನಲ್ಲಿ ವರದಿಯಾಗಿರುವ ಪ್ರಕಾರ ಶಾನವಾಝ್ ಹುಸೇನ್ ಸಂಬಂಧಿಕರೊಬ್ಬರ ನಿಧನಕ್ಕೆ ಸಂತಾಪ ಸೂಚಿಸಲು ಆಲಿಗಡಕ್ಕೆ ಬಂದಿದ್ದಾಗ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ತನ್ನ ಜಮೀನನ್ನೆ ಕಳೆದುಕೊಂಡಿದೆ. ಸೋನ್‍ಭದ್ರದ ಮೂಲಕ ಜಮೀನು ಹುಡುಕುತ್ತಿದೆ. ಆದ್ದರಿಂದ ಪ್ರಿಯಾಂಕಾ ಗಾಂಧಿಗೆ ದಲಿತರ ಮೇಲೆ ಪ್ರೀತಿ ಹುಟ್ಟಿದೆ. ಆದರೆ ಕಾನೂನು ವ್ಯವಸ್ಥೆಯಲ್ಲಿ ಯೋಗಿ ಕಟ್ಟುನಿಟ್ಟಾಗಿದ್ದಾರೆ ಎಂದು ಶಾನವಾಝ್ ಹುಸೇನ್ ಹೇಳಿದರು.

ಭಾರತದಲ್ಲಿ ಮುಸ್ಲಿಮರು ಹೆಚ್ಚು ಸುರಕ್ಷಿತರಾಗಿದ್ದಾರೆ. ಬಿಹಾರದಲ್ಲಿ ನಡೆದ ಮೋಬ್ ಲಿಂಚಿಗ್ ಕುರಿತು ಅವರು ಇದೊಂದು ಹೊಡೆದಾಟದ ಘಟನೆಯಾಗಿದೆ. ಆದ್ದರಿಂದ ಇದು ಮೋಬ್ ಲಿಂಚಿಂಗ್ ಅಲ್ಲ ಎಂದು ಅವರು ಹೇಳಿದರು. ಇದೇವೇಳೆ ಸಮಾಜವಾದಿ ಪಾರ್ಟಿ ನಾಯಕ ಆಝಂಖಾನ್‍ರನ್ನು ಶಾನವಾಝ್ ಕಟುವಾಗಿ ಟೀಕಿಸಿದರು.