ವಂದೇ ಮಾತರಂಗೆ ರಾಷ್ಟ್ರಗೀತೆಯ ಸಮಾನ ಸ್ಥಾನಮಾನ ಕೊಡಿಸಲು ಹೈಕೊರ್ಟಿನಲ್ಲಿ ಅರ್ಜಿ

0
599

ಹೊಸದಿಲ್ಲಿ, ಜು. ರಾಷ್ಟ್ರಗೀತೆ ಜನಗಣಮನದ ಸಮಾನ ಸ್ಥಾನಮಾನವನ್ನು ವಂದೇ ಮಾತರಂ ಗೂ ನೀಡಬೇಕೆಂದು ದಿಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ನಾಯಕ ಮತ್ತು ನ್ಯಾಯವಾದಿ ಅಶ್ವಿನಿ ಉಪಧ್ಯಾಯ ಅರ್ಜಿ ಸಲ್ಲಿಸಿದ್ದು ಬಂಕಿಮ್ ಚಂದ್ರ ಚಟರ್ಜಿಯವರ ವಂದೇಮಾತರಂಗೆ ರಬೀಂದ್ರನಾಥ್ ಟಾಗೋರ್ ಬರೆದ ರಾಷ್ಟ್ರಗೀತೆಯ ಸಮಾನ ಅಧಿಕೃತ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದರು.

ಈ ಅರ್ಜಿಯ ಮೇಲೆ ಮಂಗಳವಾರ ವಿಚಾರಣೆ ನಡೆಯಲಿದೆ. ಅಶ್ವಿನಿ ಉಪಾಧ್ಯಾಯರು ತಮ್ಮ ಅರ್ಜಿಯಲ್ಲಿ ರಾಷ್ಟ್ರಗೀತೆ ಸ್ವತಂತ್ರ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿತ್ತು. 1986ರಲ್ಲಿ ರಬೀಂದ್ರನಾಥ್ ಟಾಗೋರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರಾಜಕೀಯ ಪರಿಕಲ್ಪನೆಯಲ್ಲಿ ಇದನ್ನು ಹಾಡಿದ್ದರು. ಜನಗಣಮನವು ದೇಶದ ಪರಿಕಲ್ಪನೆಯನ್ನು ಅಭಿವ್ಯಕ್ತಗೊಳಿಸುತ್ತಿದೆ. ಇದೇರೀತಿ ವಂದೇ ಮಾತರಂ ದೇಶದ ಇತಿಹಾಸವನ್ನು ಅಭಿವ್ಯಕ್ತಿಗೊಳಿಸುತ್ತಿದೆ ಎಂದು ಉಪಾಧ್ಯಾಯ ವಾದಿಸಿದ್ದಾರೆ.